ಸೋಮವಾರ, ಜೂನ್ 14, 2021
22 °C
ದೇವನಹಳ್ಳಿ: ಆಕ್ಸ್‌ಫರ್ಡ್‌ ಆಂಗ್ಲಶಾಲೆಯ ಕಾರ್ಯದರ್ಶಿ ಅಭಿಮತ

ಎಸ್ಸೆಸ್ಸೆಲ್ಸಿ ಫಲಿತಾಂಶ: ಶ್ರಮಕ್ಕೆ ತಕ್ಕ ಪ್ರತಿಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದಂತಾಗಿದೆ ಎಂದು ಆಕ್ಸ್‌ಫರ್ಡ್‌ ಆಂಗ್ಲಶಾಲೆ ಆಡಳಿತ ಮಂಡಳಿ ಕಾರ್ಯ ದರ್ಶಿ ರಾಮಚಂದ್ರಗೌಡ ಹೇಳಿದರು.

ಶಾಲೆಯಲ್ಲಿ ಫಲಿತಾಂಶ ಕುರಿತು ವಿವರಿಸಿದ ಅವರು, ‘ಈ ಬಾರಿ ಪರೀಕ್ಷೆ ಬರೆದವರಲ್ಲಿ 40 ವಿದ್ಯಾರ್ಥಿಗಳು, 60 ವಿದ್ಯಾರ್ಥಿನಿಯರು ಒಟ್ಟು 100 ಮಕ್ಕಳು ಇದ್ದರು. ಶೇ 100ರಷ್ಟು ಫಲಿತಾಂಶ ಬಂದಿದೆ. 2003ರಿಂದ ಪ್ರತಿವರ್ಷ ಶೇ 100 ಬರುತ್ತಿರುವುದು ಶಿಕ್ಷಕರ, ಪೋಷಕರ ಮತ್ತು ವಿದ್ಯಾರ್ಥಿಗಳ ಸಹಕಾರದಿಂದ ಎಂದರು.

100 ವಿದ್ಯಾರ್ಥಿಗಳ ಪೈಕಿ 38 ವಿದ್ಯಾರ್ಥಿಗಳು ಶೇ 90ಕ್ಕಿಂತ ಅಧಿಕ ಅಂಕಗಳಿಸಿದ್ದಾರೆ’ ಎಂದರು.

‘51 ವಿದ್ಯಾರ್ಥಿಗಳು ಶೇ 80 ರಿಂದ 89ರಷ್ಟು ಅಂಕಪಡೆದಿದ್ದಾರೆ, 11ವಿದ್ಯಾರ್ಥಿಗಳು ಶೇ 70 ರಿಂದ 79 ರಷ್ಟು ಫಲಿತಾಂಶ ಪಡೆದಿದ್ದು ಶಿಕ್ಷಣ ಇಲಾಖೆಯು ನೀಡಿದ ನಮ್ಮ ಶಾಲೆಯ ಗುಣಾತ್ಮಕ ಶಿಕ್ಷಣದ ಶೇಕಡಾವಾರು ಮೌಲ್ಯ 95.21ರಷ್ಟಿದೆ’ ಎಂದರು.

ಶಾಲಾ ಆಡಳಿತಾಧಿಕಾರಿ ಕೆ.ಎ. ಸುಬ್ಬಯ್ಯ ಮತ್ತು ಮುಖ್ಯಶಿಕ್ಷಕಿ ಛಾಯ ಮಾತನಾಡಿ, ‘ಗುಣಮಟ್ಟದ ಬೋಧನಾ ಶೈಲಿಯಲ್ಲಿ ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಲಾಗಿತ್ತು. ಶಿಕ್ಷಕರು ಮಕ್ಕಳನ್ನು ದತ್ತು ಪಡೆದು ಸೇತುಬಂಧ, ಗುಂಪುಗೂಡಿ ಅಭ್ಯಾಸ ಮತ್ತು ಪರಸ್ಪರ ಚರ್ಚೆ, ಸಮಸ್ಯೆಗೆ ಸ್ಥಳದಲ್ಲೆ ಪರಿಹಾರ ನೀಡಲಾಗುತ್ತಿತ್ತು. ಶೈಕ್ಷಣಿಕ ಸಾಲಿನ ಆರಂಭದಿಂದ ನವೆಂಬರ್ ವೇಳೆಗೆ ವಿಷಯವಾರು ಬೋಧನೆ ಮುಗಿಸಿ ಪುನರಾವರ್ತನೆ ನಡೆಸಲಾಗುತ್ತಿತ್ತು. ಕೋವಿಡ್ 19ರ ಸಮಸ್ಯೆ ಸಂದರ್ಭ ಆನ್‌ಲೈನ್‌ನಲ್ಲಿ ಬೋಧನೆಯನ್ನು ನಡೆಸಲಾಯಿತು. ಇದೆಲ್ಲದರ ಪರಿಣಾಮ ಉತ್ತಮ ಫಲಿತಾಂಶ ಹೊರಹೊಮ್ಮಲು ಸಾಧ್ಯವಾಗಿದೆ’ ಎಂದು ಹೇಳಿದರು.

ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಎಸ್ ಶಮಿತ 619 (ಶೇ 99), ಆರ್.ಸ್ಫೂರ್ತಿ 612 (97.9), ಜಿ.ಎಂ.ಪುನೀತ್ 611 (ಶೇ.97.8), ಜಿ.ಆರ್.ನೇಹ 610 (ಶೇ 97.6), ಪಿ.ಬಿ.ತಿಲಗವತಿ 608 (97.3) ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.