ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಲ್‌ ಇನ್‌ ಸ್ಪೆಕ್ಟರ್‌ಗೆಮುಖ್ಯಮಂತ್ರಿ ಪದಕ

Last Updated 1 ಜನವರಿ 2021, 2:38 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರದ 2019ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಪಟ್ಟಿ ಪ್ರಕಟವಾಗಿದ್ದು, ದೊಡ್ಡಬಳ್ಳಾಪುರ ಸರ್ಕಲ್‌ ಇನ್‌ಸ್ಪೆಕ್ಟರ್‌ ಆಗಿ ಸೇವೆ ಸಲ್ಲಿಸುತ್ತಿರುವ ಎಂ.ಬಿ.ನವೀನ್‌ಕುಮಾರ್‌ ಅವರಿಗೆ ಸಂದಿದೆ.

ಇಡೀ ದೇಶದ ಗಮನ ಸೆಳೆದಿದ್ದ ಡ್ರೀಮ್ಸ್ ಇನ್ ಫ್ರಾ ಟಿಜಿಎಸ್ ಗೃಹ ಕಲ್ಯಾಣ್ ಪ್ರಕರಣದ ₹1,400 ಕೋಟಿ ಹಗರಣ, ಅಪಾರ್ಟ್‌ ಮೆಂಟ್ಸ್‌ಗಳ ಬಹು ಕೋಟಿ ಹಗರಣದ ಪ್ರಮುಖ ರೂವಾರಿಯಾಗಿದ್ದ ದಿಶಾಚೌಧರಿ, ರಾಯಚೂರು ಜಿಲ್ಲೆ ಸಿಂಧನೂರಿನ ನಕಲಿ ಭತ್ತದ ಗೋದಾಮುಗಳ ₹25 ಕೋಟಿ ಹಗರಣ ಹಾಗೂ 4 ವರ್ಷಗಳ ಕಾಲ ಸಿಬಿಐ, ಸಿಐಡಿ ಇಂಟಲಿಜೆನ್ಸ್ ಕೈಗೂ ಸಹ ಸಿಗದೆ ತಪ್ಪಿಸಿಕೊಂಡಿದ್ದ ಇಂಟರ್ ಪೋಲ್ ರೆಡ್‌ಕಾರ್ನರ್ ಆರೋಪಿ ಅಲೆಕ್ಸಾಂಡರ್ ಬ್ರೂನೊ ವೆಹ್ನೆಲ್ಟ್‌ ಎಂಬಾತನನ್ನು ಬಂಧಿಸುವಲ್ಲಿ ತೋರಿರುವ ಸಾಧನೆಗಳಿಗಾಗಿ ಎಂ.ಬಿ.ನವೀನ್‌ಕುಮಾರ್‌ ಅವರು ಮುಖ್ಯಮಂತ್ರಿ ಪದಕ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT