ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿಯಲ್ಲಿ ಟಿಪ್ಪು ಸ್ಮಾರಕ ನಿರ್ಮಿಸಿ: ವಾಟಾಳ್‌ ನಾಗರಾಜ್‌ ಆಗ್ರಹ

Published 11 ನವೆಂಬರ್ 2023, 6:45 IST
Last Updated 11 ನವೆಂಬರ್ 2023, 6:45 IST
ಅಕ್ಷರ ಗಾತ್ರ

ದೇವನಹಳ್ಳಿ: ದೇವನಹಳ್ಳಿಯಲ್ಲಿ ಟಿಪ್ಪು ಸುಲ್ತಾನ್‌ ಜನ್ಮಿಸಿದ್ದು, ಇಲ್ಲಿ ಅವರು ಇತಿಹಾಸ, ಅವರ ಆಡಳಿತ, ಪರಾಕ್ರಮ ಸೇರಿದಂತೆ ಅವರ ಸಾಧನೆ ಒಳಗೊಂಡ ಬೃಹತ್‌ ಸ್ಮಾರಕ ನಿರ್ಮಿಸಿ, ವಸ್ತು ಸಂಗ್ರಹಾಲಯ ಸ್ಥಾಪಿಸಬೇಕು ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಳ್‌ ನಾಗರಾಜ್‌ ಆಗ್ರಹಿಸಿದರು.

ಟಿಪ್ಪು ಸುಲ್ತಾನ್‌ ಜಯಂತಿ ಅಂಗವಾಗಿ ಪಟ್ಟಣದ ಟಿಪ್ಪು ಉದ್ಯಾನದಲ್ಲಿರುವ ಟಿಪ್ಪು ಪುತ್ಥಳಿಗೆ ಶುಕ್ರವಾರ ಪುಪ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ‘ಶತ ಶತಮಾನಗಳಿಮದ ಟಿಪ್ಪು ವಿಚಾರಗಳನ್ನು ಬೆಳೆಸುವಲ್ಲಿ ಸೋತ್ತಿದ್ದೇವೆ. ಇದು ನೋವಿನ ಸಂಗತಿ’ ಎಂದು ಬೇಸರಿಸಿದರು.

ದೇವನಹಳ್ಳಿಯ ಒಂದು ಮೂಲೆಯಲ್ಲಿ ನಾಲ್ಕು ಕಲ್ಲು ಇಟ್ಟು ಟಿಪ್ಪು ಜನ್ಮ ಸ್ಥಳ ಎಂದು ಗುರುತಿಸಿದ್ದಾರೆ. ಇಂದಿಗೂ ಅವರ ಮನೆ ಎಲ್ಲಿತ್ತು ಎಂಬ ಮಾಹಿತಿ ಇಲ್ಲ ಎಂದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘15 ವರ್ಷಗಳ ಮುನ್ನವೇ ದೇವನಹಳ್ಳಿಯಲ್ಲಿ ಟಿಪ್ಪು ಜಯಂತಿ ಆಚರಣೆ ಪ್ರಾರಂಭಿಸಿದ್ದೇವೆ. ಖಮರುಲ್ಲಾ ಇಸ್ಲಾಂ ಅವರು ಸಚಿವರಾಗಿದ್ದಾಗ ಟಿಪ್ಪು ಜಯಂತಿ ರಾಜ್ಯ ಸರ್ಕಾರ ಪ್ರಾರಂಭಿಸಿತ್ತು, ಅದರಲ್ಲಿ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಭಾಗಿಯಾಗಿದ್ದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪು ಜಯಂತಿ ಆರಂಭಿಸಿದರು. ಮುಂದೆ ಬಂದಂತಹ ಸರ್ಕಾರ ಅದನ್ನು ಮುಂದುವರೆಸುವ ಬದಲು ಜಾತ್ಯತೀತ ತತ್ವದ ವಿರೋಧವಾಗಿ ನಡೆದುಕೊಂಡಿರುವುದು ಸಂವಿಧಾನ ಬದ್ಧವಲ್ಲದ ಅಗೌರವ ನಡೆ ಎಂದು ಟೀಕಿಸಿದರು.

ಅಕ್ಷಮ್ಯ ಅಪರಾಧ: ಟಿಪ್ಪು ಸುಲ್ತಾನ್‌ ಜಯಂತಿ ನಿಲ್ಲಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ದೇವನಹಳ್ಳಿಗೆ ದೇಶ ವಿದೇಶದಿಂದ ಜನರು ಬರುವುದಿರಂದ ಟಿಪ್ಪು ಸುಲ್ತಾನರ ಜನ್ಮ ಸ್ಥಳದಲ್ಲಿ ಸ್ಮಾರಕ ರಚಿಸಬೇಕು. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮ್ಯರವರು ಸಮಿತಿ ರಚಿಸಬೇಕು ಎಂದು ವಾಟಾಳ್‌ ನಾಗರಾಜ್‌ ಒತ್ತಾಯಿಸಿದರು.

ವಸ್ತು ಸಂಗ್ರಹಾಲಯ ನಿರ್ಮಿಸಿ, ಹೈದರ್ ಅಲಿ -ಟಿಪ್ಪು ಅವರ ಇತಿಹಾಸ, ಅವರು ಹೋರಾಟಗಳು, ಯುದ್ಧಗಳ ಮಾಹಿತಿ ನೀಡಬೇಕು. ಇಂಗ್ಲೆಂಡ್‌ನಲ್ಲಿರುವ ಟಿಪ್ಪುರವರ ಖಡ್ಗ ಸೇರಿದಂತೆ ಇತರೇ ವಸ್ತುಗಳನ್ನು ರಾಜ್ಯ ಸರ್ಕಾರ ಅಲ್ಲಿಂದ ತಂದು ಇಲ್ಲಿ ಇಡಬೇಕು ಎಂದರು.

ಇದೇ ವೇಳೆ ಮಹಮ್ಮದ್ ಯುಸಫ್,ಎ.ಎಸ್.ಇಬ್ರಾಹಿಂ, ಅಲ್ಲಾ ಬಕ್ಷ್‌, ಮೌಲ ಸಾಬ್, ಮಹಬೂಬ್ ಜಾನ್ ಸೇರಿದಂತೆ ಸ್ಥಳೀಯರು ಇದ್ದರು.

ಕೆಎಚ್‌ಎಂ ಬೆಂಬಲಿಗನಿಗೆ ತರಾಟೆ
ದೇವನಹಳ್ಳಿಯ ಟಿಪ್ಪು ಉದ್ಯಾನಕ್ಕೆ ಗೌರವ ನಮನ ಸಲ್ಲಿಸಲು ಕೆ.ಎಚ್‌.ಮುನಿಯಪ್ಪ ಅವರು ಬಂದಾಗ ಅಲ್ಲಿದ್ದ ವಾಟಾಳ್ ನಾಗರಾಜ್‌ರೊಂದಿಗೆ ತೆಲಗು ಭಾಷೆಯಲ್ಲಿ ಮಾತನಾಡಿದ ಮಾಜಿ ಪುರಸಭೆ ಅಧ್ಯಕ್ಷರಿಗೆ ವಾಟಳ್‌ ನಾಗರಾಜ್‌ ಖಾರವಾಗಿ ಪ್ರತಿಕ್ರಿಯಿಸಿ ಮೊದಲು ಕನ್ನಡದಲ್ಲಿ ಮಾತನಾಡಿ ಎಂದು ಗದಿರಿದ್ದರು. ಮಾಧ್ಯಮಗಳೊಂದಿಗೆ ವಾಟಾಳ್ ಮಾತನಾಡುತ್ತಿದಾಗ ಅಲ್ಲಿಯೇ ಕಾಯುತ್ತಿದ್ದ ಸಚಿವರನ್ನು ಮೆಚ್ಚಿಸಲು ಬಂದ ಬೆಂಬಲಿಗನಿಗೆ ಶಿಸ್ತಿನ ಪಾಠ ಹೇಳಿ ಕೆ.ಎಚ್‌.ಮುನಿಯಪ್ಪರಿಗೆ ಕೈ ಕುಲುಕಿ ಕುಶಲೋಪರಿ ವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT