ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್: ಬೆಳಕಿನ ಹಬ್ಬಕ್ಕೆ ದುಬಾರಿ ಪಟಾಕಿ

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಆನೇಕಲ್: ದೀಪಾವಳಿ ಎಂದರೆ ಬೆಳಕಿನ ಹಬ್ಬ, ಪಟಾಕಿಗಳ ಸದ್ದಿನ ಸಡಗರ. ಕರ್ನಾಟಕ ಮತ್ತು ತಮಿಳುನಾಡಿನ ಗಡಿಯ ಅತ್ತಿಬೆಲೆ ಬಳಿಯಲ್ಲಿ ಪಟಾಕಿಗಳ ಭರಾಟೆಯ ವ್ಯಾಪಾರ ಪ್ರತಿವರ್ಷ ನಡೆಯುತ್ತದೆ.ತಮಿಳುನಾಡಿನ ಶಿವಕಾಶಿ ಪಟಾಕಿ ತಯಾರಿಕೆಯ ಪ್ರಮುಖ ಕೇಂದ್ರ.

ಶಿವಕಾಶಿಯಿಂದ ತಂದ ಪಟಾಕಿಗಳನ್ನು ಮಾರಾಟ ಮಾಡಲು ರಾಷ್ಟ್ರೀಯ ಹೆದ್ದಾರಿ 7ರ ಅತ್ತಿಬೆಲೆ ಸಮೀಪದ ಗಡಿಯ ಬಯಲಿನಲ್ಲಿ ನೂರಾರು ಅಂಗಡಿಗಳು ತಲೆಯೆತ್ತಿವೆ. ಕರ್ನಾಟಕದ ಗಡಿಯ ಬಿಡುತ್ತಿದ್ದಂತೆಯೇ ತಮಿಳುನಾಡಿನ ಗಡಿಯಲ್ಲೂ ಸಹ ಅಂಗಡಿಗಳ ಸಾಲು ಸಾಲು ಕಂಡು ಬರುತ್ತದೆ.

ಗಡಿ ತಲುಪುತ್ತಿದ್ದಂತೆಯೇ ಪುಟಾಣಿ ಮಕ್ಕಳು ಸೇರಿದಂತೆ ಗ್ರಾಹಕರನ್ನು ಸೆಳೆಯಲು ಪೀಪಿ ಊದುತ್ತಾ, ರಿಯಾಯಿತಿ ಘೋಷಣೆಗಳನ್ನು ಕೂಗುತ್ತಾ ಬರುವ ಏಜೆಂಟ್‌ಗಳ ದಂಡು ಕಂಡುಬರುತ್ತದೆ. ಬನ್ನಿ ಬನ್ನಿ ಶೇ.50, ಶೇ.70, ಶೇ.90 ರಿಯಾಯಿತಿ ಎಂದು ಕೂಗಿಹೇಳುತ್ತಾ ಗ್ರಾಹಕರನ್ನು ಸೆಳೆಯುತ್ತಾರೆ.

ವಾರಾಂತ್ಯದ ದಿನಗಳಾಗಿರುವುದರಿಂದ ಶನಿವಾರ ಅತ್ತಿಬೆಲೆಯಲ್ಲಿ ಪಟಾಕಿ ಕೊಳ್ಳುಲು ಭಾರಿ ಸಂಖ್ಯೆಯ ಜನ ಸಂದಣಿ ಸೇರಿತ್ತು. ಬಹುತೇಕರು ದೂರದಿಂದ ಕಾರುಗಳಲ್ಲಿ ಬಂದದ್ದರಿಂದ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು. ಭಾನುವಾರ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಹೇಳಿದರು.

ವ್ಯಾಪಾರ ಮಾಡುವಲ್ಲಿಯೂ ಸಹ ಜಾಣ್ಮೆ ತೋರಬೇಕು. ಇಲ್ಲವಾದಲ್ಲಿ ಪಟಾಕಿ ಟೋಪಿ ಗ್ಯಾರಂಟಿ. ಪಟಾಕಿ ಬಾಕ್ಸ್ ಮೇಲೆ ಹಾಕಿರುವ ದರದ ಶೇ.90ರವರೆಗೂ ರಿಯಾಯಿತಿ ಬಹಿರಂಗವಾಗೇ ಘೋಷಣೆ ಮಾಡಿದ್ದಾರೆ.
ಇದರಲ್ಲಿಯೂ ಸಹ ಚೌಕಾಸಿಗೆ ಸಾಧ್ಯತೆಯಿದೆ.
 
ಸ್ಟ್ಯಾಡಂರ್ಡ್ ಕಂಪನಿಯ ಪಟಾಕಿಗಳು ಮಾತ್ರ ಸ್ವಲ್ಪ ದುಬಾರಿ, ಈ ಕಂಪನಿಯ ಪಟಾಕಿಗಳಿಗೆ ಶೇ.75ರಿಂದ 80ರವರೆಗೆ ರಿಯಾಯಿತಿ ಘೋಷಿಸಿದ್ದಾರೆ.20 ರೂ.ನಿಂದ 11 ಸಾವಿರ ರೂ.ವರೆಗೂ ಪಟಾಕಿಗಳು ಲಭ್ಯವಿವೆ. ಸಾವಿರ ಸ್ಕೈ ಶಾರ್ಟ್ಸ್ ಎಂಬ ಪಟಾಕಿಯೊಂದರ ಬೆಲೆ 11 ಸಾವಿರ ರೂ. ಇರುವುದಾಗಿ ಇಲ್ಲಿಯ ಅಂಗಡಿಯೊಂದರ ಮಾಲೀಕರು ಹೇಳುತ್ತಾರೆ.

ತುಮಕೂರಿನಿಂದ ಪಟಾಕಿ ಕೊಳ್ಳಲು ಆಗಮಿಸಿದ್ದ ಗ್ರಾಹಕ ಸಂಗಮೇಶ್ ಅಭಿಪ್ರಾಯ ಪಡುವಂತೆ ಬೇರೆಡೆಗಿಂತ ಹೊಸೂರು -ಅತ್ತಿಬೆಲೆ ಬಳಿ ಪಟಾಕಿಗಳು ಕಡಿಮೆ ಬೆಲೆಗೆ ದೊರೆಯುತ್ತವೆ. ಹಾಗಾಗಿ ಪ್ರತಿವರ್ಷ ಇಲ್ಲಿಂದ ಕೊಂಡೊಯ್ಯುವುದಾಗಿ ಹೇಳಿದರು. ಮಹಿಳೆಯರು, ಮಕ್ಕಳು ಅಂಗಡಿಗಳಲ್ಲಿ ಪಟಾಕಿ ಆಯ್ಕೆ ಮಾಡುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು.

ಮೂರು ತಿಂಗಳ ಹಿಂದೆ ಶಿವಕಾಶಿಯಲ್ಲಿ ಪಟಾಕಿಗಳನ್ನು ಕೊಳ್ಳಲು ಆರ್ಡರ್ ಬುಕ್ ಮಾಡಿದರೆ ಕಡಿಮೆ ಬೆಲೆಗೆ ದೊರೆಯುತ್ತವೆ. ಅವಧಿ ಕಡಿಮೆಯಾಗುತ್ತಿದ್ದಂತೆಯೇ ಬೆಲೆ ಹೆಚ್ಚಾಗುತ್ತದೆ ಎಂದು ಅಂಗಡಿಯವರು ತಿಳಿಸಿದರು. ಪ್ರತಿ ಅಂಗಡಿಯವರು 20ರಿಂದ 25 ಲಕ್ಷ ರೂ. ಬಂಡವಾಳ ಹಾಕಿದ್ದು ನಾಲ್ಕೈದು ದಿನಗಳಲ್ಲಿ ವ್ಯಾಪಾರವನ್ನು ಪೂರ್ಣಗೊಳಿಸಬೇಕಾಗಿದೆ.

ಅಂಗಡಿಗಳಿಗೆ ಯಾವುದೇ ರೀತಿಯಲ್ಲಿ ವಿಮೆ ಇರುವುದಿಲ್ಲ ಹಾಗಾಗಿ ತುಂಬ ಜಾಣತನದಿಂದ ನೋಡಿಕೊಳ್ಳಬೇಕಾಗಿದೆ. ಅಂಗಡಿಗಳಿಗಾಗಿ ಖಾಲಿ ಜಾಗದಲ್ಲಿ ಟೆಂಟ್‌ಗಳನ್ನು ಹಾಕಬೇಕಾಗಿದೆ. ಜಾಗಕ್ಕೂ ಸಹ ಬಾಡಿಗೆ ಕೊಡಬೇಕಾಗಿದೆ. ಇವೆಲ್ಲ ಖರ್ಚುಗಳನ್ನು ಕಳೆದರೂ ಸಹ ಒಂದು ವಾರ ಕಷ್ಟಪಟ್ಟರೆ ಲಾಭ ಮಾಡಿಕೊಳ್ಳಬಹುದು ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT