ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯಲ್ಲೇ ಕಣ: ಪ್ರಾಣಕ್ಕೆ ಸಂಚಕಾರ

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ದೇವನಹಳ್ಳಿ: ಪಾರಂಪರಿಕ ಕಣಗಳ ಮೂಲ ಮಾದರಿಯಲ್ಲಿ ಒಕ್ಕಣೆ ಮಾಡುವುದನ್ನು ಮರೆತಿರುವ ರೈತರು ರಸ್ತೆಗಳನ್ನೇ ಕಣಗಳನ್ನಾಗಿ ಮಾಡಿಕೊಳ್ಳುತ್ತಿರುವುದು ವಾಹನ ಸವಾರರ ಪ್ರಾಣಕ್ಕೇ ಸಂಚಕಾರ ತಂದೊಡ್ಡಿದೆ.

ರಸ್ತೆಯೇ ಕಣಗಳು: ತಾಲ್ಲೂಕು ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ಈಗ ರೈತನ ಒಕ್ಕಣೆ ಕಣಗಳಾಗಿ ಮಾರ್ಪಟ್ಟಿವೆ. ಬಹುತೇಕ ರಸ್ತೆಗಳ್ಲ್ಲಲಿ, ರಾಗಿ, ಭತ್ತ ಹುರಳಿ ಸೇರಿದಂತೆ ವಿವಿಧ ಬಗೆಯ ಧಾನ್ಯಗಳನ್ನು ಭರದಿಂದ ಒಕ್ಕಣೆ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಒಕ್ಕಣೆ ಕಾಲ ಬಂದರೆ ಹೊಲಗಳಲ್ಲಿ ಹಾಗೂ ಅದಕ್ಕಾಗಿಯೇ ಸೂಕ್ತ ಸ್ಥಳವನ್ನು ಕಾಯ್ದಿರಿಸಿ ರೈತರು ನಿರ್ಮಿಸಿಕೊಳ್ಳುತ್ತಿದ್ದ ಕಣಗಳು ಇಂದು ಬಹುತೇಕ ಮಾಯವಾಗುತ್ತಿವೆ.

ಮೃತ್ಯುಕೂಪ: ಎಲ್ಲೆಡೆ ರಾಗಿಯನ್ನು ಯಥೇಚ್ಛವಾಗಿ ಒಕ್ಕಣೆ ಮಾಡಲಾಗುತ್ತಿದೆ. ಸಹಜವಾಗಿಯೇ ಈ ರಾಗಿ ತೆನೆಗಳು ರಸ್ತೆಯಲ್ಲಿ ಸಂಚರಿಸುವ ವಾಹನಗಳು ನಿಯಂತ್ರಣ ಕಳೆದುಕೊಳ್ಳುವಂತೆ ಮಾಡುತ್ತವೆ ಹಾಗೂ ಅಪಘಾತಕ್ಕೆ ಈಡು ಮಾಡುತ್ತವೆ ಎಂಬುದು ಸಾರ್ವಜನಿಕರ ದೂರು.
ಹೀಗಾಗಿ ರಸ್ತೆಗಳು ಮೃತ್ಯುಕೂಪಗಳಾಗಿವೆ ಎಂದು ದೂರುತ್ತಾರೆ.

ಇಲಾಖೆಯ ನಿರ್ಲಕ್ಷ್ಯ: `ರಸ್ತೆಗಳಲ್ಲಿ ರೈತರು ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿರುವ ಕಣಗಳನ್ನು ನಿಯಂತ್ರಿಸಲು ಸಂಬಂಧಪಟ್ಟವರು ಮುಂದಾಗಿಲ್ಲ. ಈ ಅಧಿಕಾರಿಗಳು ರಸ್ತೆ ನಿರ್ಮಾಣ ಮಾತ್ರವಷ್ಟೇ ತಮ್ಮ ಕೆಲಸ ಎಂದು ತಿಳಿದಂತಿದೆ.

ಅಪಘಾತಗಳ ಬಗ್ಗೆ ರೈತರಲ್ಲಿ ತಿಳಿವಳಿಕೆ ಮೂಡಿಸುವ ಪ್ರಯತ್ನ ಮಾಡುತ್ತಿಲ್ಲ. ಇದರಿಂದಾಗಿ ಒಕ್ಕಣೆ ಕಣಗಳ ರಸ್ತೆಗಳು ಸವಾರರ ಪಾಲಿಗೆ ದುಃಸ್ವಪ್ನವಾಗಿ ಪರಿಣಮಿಸಿವೆ~ ಎಂದು ಸಾರ್ವಜನಿಕರು ಅಲವತ್ತುಕೊಂಡಿದ್ದಾರೆ.

ರೈತರ ಕಣಕ್ಕೆ ಸಹಾಯಧನ: ರೈತರ ಆರ್ಥಿಕ ಸಂಕಷ್ಟವನ್ನರಿತ ಸರ್ಕಾರ ಗ್ರಾಮಗಳಲ್ಲಿ ಕಣಗಳಿಗೆ ಅನುವು ಮಾಡಿಕೊಟ್ಟಿದೆ.

ಸಾಮೂಹಿಕವಾದ 15ಗಿ15 ಮೀ. ಅಳತೆಯ ಕಣಕ್ಕೆ 50 ಸಾವಿರ ರೂಪಾಯಿ, ವೈಯಕ್ತಿಕ ಕಣಕ್ಕೆ 25 ಸಾವಿರ ರೂ ಮತ್ತು ಪರಿಶಿಷ್ಟ ಜಾತಿಯ ರೈತರಿಗೆ ವಿಶೇಷ ಘಟಕ ಯೋಜನೆಯಡಿಯಲ್ಲಿ 75 ಸಾವಿರ ರೂಗಳನ್ನು ನೀಡಲಾಗುತ್ತಿದೆ.

ಗ್ರಾಮ ಪಂಚಾಯಿತಿ ಅನುಮೋದನೆಯೊಂದಿಗೆ ಕೃಷಿ ಸಂಸ್ಕರಣಾ ಯೋಜನೆಯಡಿಯಲ್ಲಿ ಕೃಷಿ ಇಲಾಖೆ ಇದಕ್ಕೆ ನೆರವು ನೀಡುತ್ತಿದೆ ಆದರೆ ಬಹುತೇಕ ರೈತರಿಗೆ ಇದರ ಅರಿವು ಇದ್ದಂತಿಲ್ಲ. ರೈತರ ಅರಿವಿನ ಕೊರತೆ ಹಾಗೂ ಅನಕ್ಷರತೆ ವಿನಾಕಾರಣವಾಗಿ ಅನ್ಯರ ಪ್ರಾಣಕ್ಕೆ ಎರವಾಗುವುದನ್ನು ತಪ್ಪಿಸಲು ಸಂಬಂಧಿಸಿದವರು ಮುಂದಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT