ವಿಜಯಪುರ: ಇಲ್ಲಿನ ಸಾಹಿತ್ಯಾಸಕ್ತರ ಬಳಗ, ಕೋ ಕೂಟ, ಪ್ರಗತಿ ಕಾಲೇಜು ಕನ್ನಡ ಪುಸ್ತಕಪ್ರೇಮಿ ವಿದ್ಯಾರ್ಥಿ ಬಳಗದ ವತಿಯಿಂದ ಗಿರಿಜಾಶಂಕರ ಸಮುದಾಯ ಭವನದಲ್ಲಿ ಜಿಲ್ಲಾ ಮಟ್ಟದ ಕಾವ್ಯ ಕಮ್ಮಟ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬಂಡಾಯ ಸಾಹಿತ್ಯದಲ್ಲಿ ಸಾಂಸ್ಕೃತಿಕ ಸಂಘರ್ಷ ವಿಷಯವಾಗಿ ಉಪನ್ಯಾಸ ನೀಡಿದ ಬಿ.ಟಿ. ಲಲಿತಾ ನಾಯಕ್, ಬಂಡಾಯ ಸಾಹಿತ್ಯ ಸಮಾಜವನ್ನು ತಿದ್ದುವ ಸಾಹಿತ್ಯ ಪ್ರಕಾರವಾಗಿದ್ದು, ಸಮಾಜದ ಅಂಕು ಡೊಂಕುಗಳನ್ನು ನೇರ ನುಡಿಗಳಲ್ಲಿ ಕಾವ್ಯದ ಸ್ಪರ್ಷ ನೀಡಿ ಪ್ರಸ್ತುತ ಪಡಿಸುವ ಹಾಗೂ ದೌರ್ಜನ್ಯಗಳ ವಿರುದ್ಧ ಸಿಡಿದೇಳುವ ಮನಸ್ಥಿತಿಯನ್ನು ಯುವಕರು ಬೆಳೆಸಿಕೊಳ್ಳಬೇಕಿದೆ ಎಂದು ಅವರು ಹೇಳಿದರು.

ಬಂಡಾಯ ಸಾಹಿತ್ಯದ ಹುಟ್ಟು, ಬೆಳವಣಿಗೆ ಹಾಗೂ ಅದರ ರಚನಾ ಕೌಶಲಗಳ ಬಗ್ಗೆ ಮಾಹಿತಿ ನೀಡಿದ ಅವರು, ಸ್ವಾತಂತ್ರ್ಯ ಬಂದು 69 ವರ್ಷವಾಗಿದ್ದರೂ ಇನ್ನೂ ನಮ್ಮ ಹಕ್ಕುಗಳಿಗಾಗಿ ಹೋರಾಡಬೇಕಿದೆ, ಸಮಾಜದಲ್ಲಿನ ಬ್ರಷ್ಟಾಚಾರಗಳನ್ನೂ ಕಂಡೂ ನಾವುಗಳು ಬಂಡಾಯವೇಳದೆ ಹೋದರೆ ನಾವೂ ಭ್ರಷ್ಟಾಚಾರಿಗಳಾದಂತೆಯೆ ಎಂದು ಅವರು ಹೇಳಿದರು.

ಕಾವ್ಯ ಒಂದು ವಿಸ್ಮಯ ವಿಷಯದ ಬಗ್ಗೆ ಮಾತನಾಡಿದ ಕವಿ ಬಿ.ಆರ್.ಲಕ್ಷ್ಮಣ್ ರಾವ್, ಕವಿತೆ ಮನಸಿನ ಭಾವನೆಗೆ ಹಿಡಿಯುವ ಕನ್ನಡಿ, ತಮ್ಮಲ್ಲಿನ ಭಾವನೆಯನ್ನು ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಅಕ್ಷರ ರೂಪಕ್ಕೆ ಪರಿಣಾಮಕಾರಿಯಾಗಿ ವ್ಯಕ್ತಪಡಿಸಬೇಕು, ದಿನನಿತ್ಯದ ಬಳಕೆ ಪದಗಳನ್ನೆ ಲಯಬದ್ಧವಾಗಿ ಜೋಡಿಸಿ, ಅವುಗಳಿಂದ ಭಾವವನ್ನು ಸ್ಪುರಿಸುವಂತೆ ಮಾಡುವುದೆ ಕವನ ಎಂದು ಅವರು ಹೇಳಿದರು.

ಸಾಹಿತಿ ಜರಗನಹಳ್ಳಿ ಶಿವಶಂಕರ್ ಮಾತನಾಡಿ, ಓದದ ವ್ಯಕ್ತಿ ಬರೆಯಲಾರ, ಹೆಚ್ಚು ಸಾಹಿತ್ಯವನ್ನು ಓದಿದಂತೆಲ್ಲಾ ಬರೆಯುವ ರೀತಿ, ಹೊಳಹುಗಳು ತನ್ನಿಂದ ತಾನೆ ಉದ್ಭವವಾಗುತ್ತವೆ ಎಂದು ಹೇಳಿದರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ವೃತ್ತ ನಿರೀಕ್ಷಕ ಮಹೇಶ್ ಕುಮಾರ್, ಆಧುನಿಕ ಜೀವನ ಪದ್ಧತಿಯಿಂದಾಗಿ ಮೃದು ಮನಸುಗಳು ಕಡಿಮೆಯಾಗುತ್ತಿವೆ, ಸಾಹಿತ್ಯಿಕ ಮನಸುಗಳು ಹೆಚ್ಚಾಗಲು, ಯುವಕರು ಸಾಹಿತ್ಯದೆಡೆಗೆ ಆಕರ್ಷಿತರಾಗಲು ಈ ರೀತಿಯ ಕಾವ್ಯ ಕಮ್ಮಟಗಳ ಅವಶ್ಯಕತೆ ಹೆಚ್ಚಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಮುಕಂಡರುಗಳಾದ ಪ್ರಗತಿ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಎಂ.ಸತೀಶ್ ಕುಮಾರ್, ಆವತಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ಪ್ರಗತಿ ಕಾಲೇಜು ಪ್ರಾಂಶುಪಾಲ ನಾಗರಾಜು, ಉಪನ್ಯಾಸಕ ಶ್ರೀನಿವಾಸ್, ಜಿಲ್ಲಾ ಸಾಹಿತಿ ಚಿ.ಮಾ.ಸುಧಾಕರ್ ಅವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಹಿತಿ ಚಂದ್ರಶೇಖರ ಹಡಪದ, ಮಾ.ಸುರೇಶ್ ಬಾಬು, ಬಸವರಾಜು, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಪ್ರಸಾದ್ ಶ್ರೀನಿವಾಸ ಮೂರ್ತಿ, ಶೆಟ್ಟಿ ನಾಯಕ್, ಮೋಹನ್ ಶ್ರೀವತ್ಸಾ, ಕೃಷ್ಣಮೂರ್ತಿ, ವಿ.ಎನ್.ರಮೇಶ್, ಮುನಿವೀರಣ್ಣ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.