ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನುಗಾರಿಕೆ ಗ್ರಾಮೀಣ ಜನರ ಉಪಕಸುಬು

Last Updated 23 ಅಕ್ಟೋಬರ್ 2017, 5:06 IST
ಅಕ್ಷರ ಗಾತ್ರ

ಪಟ್ಟಯ್ಯನ ಅಗ್ರಹಾರ (ದೊಡ್ಡಬಳ್ಳಾಪುರ): ತಾಲ್ಲೂಕಿನ ಪಟ್ಟಯ್ಯನ ಅಗ್ರಹಾರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಭಾನುವಾರ ಶಾಸಕ ಟಿ.ವೆಂಕಟರಮಣಯ್ಯ ಉದ್ಘಾಟನೆ ಮಾಡಿದರು.

ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರ ಆರ್ಥಿಕ ವಹಿವಾಟಿನ ಮುಖ್ಯ ಕೇಂದ್ರ ಇವತ್ತು ಹೈನುಗಾರಿಕೆ ಮೇಲೆ ನಿಂತಿದೆ. ಪ್ರತಿಯೊಬ್ಬ ರೈತರು ಹೈನುಗಾರಿಕೆಯನ್ನು ಉಪಕಸುಬಾಗಿಸಿಕೊಂಡಿದ್ದಾರೆ ಎಂದರು.

ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಹಾಲು ನೀಡುವ ಮೂಲಕ ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ದೂರ ಮಾಡುವುದು ಹಾಗೂ ಹೈನುಗಾರಿಕೆಗೂ ಪ್ರೋತ್ಸಾಹ ನೀಡಿದೆ ಎಂದರು. ಅಧ್ಯಕ್ಷತೆ ವಹಿಸಿದ್ಧ ಬಮೂಲ್‌ ಅಧ್ಯಕ್ಷ ಎಚ್‌.ಅಪ್ಪಯ್ಯಣ್ಣ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸದಸ್ಯನಾಗಿರುವ ವ್ಯಕ್ತಿ ₹140ಗಳನ್ನು ಪಾವತಿ ಮಾಡಿದರೆ, ಉಳಿದ ₹130 ಅನ್ನು ಬಮೂಲ್‌ ಪಾವತಿ ಮಾಡಲಿದೆ. ಇದೇ ರೀತಿ ಕುಟುಂಬದ ಎಲ್ಲ ಸದಸ್ಯರು ಸಹ ವಿಮೆ ಮಾಡಿಸಿದರೆ ಸಹಜ ಸಾವಿಗೆ ₹1 ಲಕ್ಷ, ಅಪಘಾತದಲ್ಲಿ ಮೃತಪಟ್ಟರೆ ₹2 ಲಕ್ಷ ವಿಮಾ ಹಣ ದೊರೆಯಲಿದೆ ಎಂದರು.

ಇದನ್ನು ಮುಂದಿನ ವರ್ಷ ₹3 ಲಕ್ಷಕ್ಕೆ ಏರಿಕೆ ಮಾಡಲಾಗುತ್ತಿದೆ. ತಾಲ್ಲೂಕಿನಲ್ಲಿ ಹೊಸ ಹಾಲು ಉತ್ಪಾದಕರ ಸಂಘಗಳವರು ಕಟ್ಟಡ ನಿರ್ಮಾಣಕ್ಕೆ ಬಮೂಲ್‌, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇರಿದಂತೆ ಒಟ್ಟು ₹7.5 ಲಕ್ಷ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದರು. 2018ರ ವೇಳೆಗೆ ತಾಲ್ಲೂಕಿನ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳು ಸ್ವತಂತ ಕಟ್ಟಡಗಳನ್ನು ಹೊಂದಲಿವೆ ಎಂದರು.

ಪುಟ್ಟಯ್ಯನ ಅಗ್ರಹಾರ ಎಂಪಿಸಿಎಸ್‌ ಅಧ್ಯಕ್ಷ ಟಿ.ವೆಂಕಟೇಶ್‌, ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮೀನಾಕ್ಷಿಕೆಂಪಣ್ಣ, ಸದಸ್ಯ ಪಿ.ಶಂಕರಪ್ಪ, ಸುನಿಲ್‌ ಕುಮಾರ್‌, ಕಾಂಗ್ರೆಸ್‌ ಒಬಿಸಿ ಜಿಲ್ಲಾ ಅಧ್ಯಕ್ಷ ರಾಜ್‌ಕುಮಾರ್‌, ನಿರ್ದೇಶಕರಾದ ಮಂಜುನಾಥ್‌, ಕುಚ್ಚಪ್ಪ, ಎನ್‌.ಕೃಷ್ಣಮೂರ್ತಿ, ಗಂಗಪ್ಪ, ಸಿ.ಕೃಷ್ಣಮೂರ್ತಿ, ಪಿ.ಟಿ.ದೇವರಾಜು, ರಾಮಯ್ಯ, ಪಿ.ಟಿ.ಕೃಷ್ಣಮೂರ್ತಿ, ಗೌರಮ್ಮ, ಮುನಿಯಮ್ಮ, ಮುಖ್ಯಕಾರ್ಯನಿರ್ವಾಹಕ ಕೆ. ಹನುಮಂತರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT