‘ಆರತಿ’ ಕಲ್ಯಾಣಕ್ಕೆ ಗಣ್ಯರ ಹಾರೈಕೆ

ಸೋಮವಾರ, ಜೂನ್ 17, 2019
29 °C

‘ಆರತಿ’ ಕಲ್ಯಾಣಕ್ಕೆ ಗಣ್ಯರ ಹಾರೈಕೆ

Published:
Updated:
Prajavani

ಬೆಳಗಾವಿ: ಇಲ್ಲಿನ ಗಂಗಮ್ಮ ಚಿಕ್ಕುಂಬಿಮಠ ಬಾಲಕಲ್ಯಾಣ ಕೇಂದ್ರದಲ್ಲಿ ಶನಿವಾರ ನಡೆದ ಅಪರೂಪದ ಕಾರ್ಯಕ್ರಮ ಗಮನಸೆಳೆಯಿತು. ವಿವೇಕಾನಂದ ಪ್ರತಿಷ್ಠಾನದವರು ನಡಸುತ್ತಿರುವ ಈ ಕೇಂದ್ರದಲ್ಲಿದ್ದ ಯುವತಿಯ ಮದುವೆಯ ಆರತಕ್ಷತೆ ಕಾರ್ಯಕ್ರಮ ಭಾವನಾತ್ಮಕ ಸನ್ನಿವೇಶಗಳನ್ನು ಸೃಷ್ಟಿಸಿತು.

20 ವರ್ಷಗಳ ಹಿಂದೆ ಸಂಸ್ಥೆಗ ಸಿಕ್ಕ ‘ಆರತಿ’ ನವ ವಧುವಾಗಿ ಸಂಭ್ರಮದಲ್ಲಿದ್ದರು. ಶ್ರೀನಿವಾಸ ದೇಶಪಾಂಡೆ ಎಂಬ ಸಾಫ್ಟ್‌ವೇರ್‌  ಉದ್ಯೋಗಿಯೊಂದಿಗೆ ಮೇ 21ರಂದು ಧಾರವಾಡದಲ್ಲಿ ಸಪ್ತಪದಿ ತುಳಿದಿದ್ದ ಅವರು, ಆರತಕ್ಷತೆಯಲ್ಲಿ ಸಮಾಜದ ಹಲವು ಕ್ಷೇತ್ರಗಳ ಗಣ್ಯರ ಆಶೀರ್ವಾದ ಪಡೆದರು.

ಸರ್ಕಾರದಿಂದ ಮಾನ್ಯತೆ ಪಡೆದ ಈ ಕೇಂದ್ರದಲ್ಲಿ ಅನಾಥ ಮಕ್ಕಳನ್ನು ಸಾಕಿ–ಸಲುಹಿ ಶಿಕ್ಷಣ ನೀಡುತ್ತಾರೆ. ವಯಸ್ಕರಾದ ನಂತರ ಮದುವೆಯನ್ನೂ ಮಾಡಿಕೊಡುತ್ತಾರೆ. ‘ಮಕ್ಕಳನ್ನು ಸಾಕಿ, ಶಿಕ್ಷಣ ಕೊಡಲಾಗುತ್ತದೆ. ಇಲ್ಲಿನ ಮಕ್ಕಳನ್ನು ದತ್ತು ಪಡೆಯುವವರೂ ಇದ್ದಾರೆ’ ಎಂದು ಟ್ರಸ್ಟಿ ವಿಜಯಕುಮಾರ ಕುಚನೂರೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಇಲ್ಲಿ ಬೆಳೆದವರಿಗೆ ಉದ್ಯೋಗ ಕೊಡಿಸುವುದು, ಮದುವೆ ಮಾಡಿ ಕೊಟ್ಟು ಜೀವನ ಗಟ್ಟಿಗೊಳಿಸುವ ಜವಾಬ್ದಾರಿಯೂ ನಮ್ಮದೇ. ಮಕ್ಕಳ ಆರೋಗ್ಯದ ಕಾಳಜಿಯನ್ನು ಕೆಎಲ್‌ಇ ಆಸ್ಪತ್ರೆ ನಿರ್ವಹಿಸುತ್ತಿದೆ’ ಎಂದು ಹೇಳಿದರು.

ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ವಿಧಾನಪರಿಷತ್ ವಿರೋಧಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್, ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ, ಆರ್‌ಸಿಯು ಕುಲಸಚಿವ ಪ್ರೊ.ಸಿದ್ದು ಆಲಗೂರ, ಸಿಂಡಿಕೇಟ್ ಸದಸ್ಯ ರಾಜು ಚಿಕ್ಕನಗೌಡರ, ರೈತ ಪರ ಹೋರಾಟಗಾರ ಕಲ್ಯಾಣರಾವ ಮುಚಳಂಬಿ ಭಾಗವಹಿಸಿದ್ದರು.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !