ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಸ್ ತಂಗುದಾಣ ಕಟ್ಟಡ ತೆರವಿಗೆ ಆಗ್ರಹ

Published 11 ಜೂನ್ 2024, 6:35 IST
Last Updated 11 ಜೂನ್ 2024, 6:35 IST
ಅಕ್ಷರ ಗಾತ್ರ

ಮುಗಳಖೋಡ: ‘ಪಟ್ಟಣದಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ರುದ್ರಭೂಮಿಯ ಜಾಗದಲ್ಲಿ ಪುರಸಭೆಯವರು ನಿರ್ಮಿಸಿದ ಬಸ್‌ ತಂಗುದಾಣ ಕಟ್ಟಡ ತೆರವುಗೊಳಿಸಬೇಕು’ ಎಂದು ಮುಖಂಡ ಸುರೇಶ ಹೊಸಪೇಟಿ ಒತ್ತಾಯಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ವೆ ಸಂಖ್ಯೆ 4ರ 1 ಎಕರೆ, 24 ಗುಂಟೆ ಜಮೀನಿನಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ರುದ್ರಭೂಮಿ ಇದೆ. ಹಲವು ವರ್ಷಗಳಿಂದ ಲಿಂಗಾಯತರು ಇಲ್ಲಿಯೇ ಅಂತ್ಯಸಂಸ್ಕಾರ ಮಾಡುತ್ತ  ಬಂದಿದ್ದಾರೆ. ರಸ್ತೆ ಪಕ್ಕದಲ್ಲಿರುವ ಆ ಜಾಗ ಅತಿಕ್ರಮಣ ಮಾಡಿ, ಬಸ್ ತಂಗುದಾಣ ಕಟ್ಟಲಾಗಿತ್ತು. ಈಗ ಸಾರ್ವಜನಿಕ ಶೌಚಗೃಹ ನಿರ್ಮಾಣಕ್ಕೆ ಪುರಸಭೆ ಮುಂದಾಗಿದೆ. ಕೂಡಲೇ ಈ ಕಾಮಗಾರಿ ನಿಲ್ಲಿಸಬೇಕು. ಜತೆಗೆ, ಬಸ್ ತಂಗುದಾಣ ತೆರವುಗೊಳಿಸಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಭೀಮಪ್ಪ ಕಡಕಬಾವಿ, ಬಿ.ಬಿ.ಬಂಡಿಗಣಿ, ಭೀಮರಾಯ ಖೇತಗೌಡರ, ಮಲ್ಲಪ್ಪ ನಾವಿ, ರಾಮಪ್ಪ ಖೇತಗೌಡರ, ಮಲ್ಲಪ್ಪ ಹೊಸಪೇಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT