ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಗಳಿ: ಗುರುಶ್ರೀ ಪ್ರಶಸ್ತಿ ಪ್ರದಾನ

Last Updated 17 ಜನವರಿ 2021, 5:12 IST
ಅಕ್ಷರ ಗಾತ್ರ

ಐಗಳಿ: ‘ಎಲೆ ಮರೆ ಕಾಯಿಯಂತಿದ್ದುಕೊಂಡು ಕಾಯಕದಲ್ಲಿ ನಿರತವಾಗಿರುವ ವ್ಯಕ್ತಿ ಗುರುತಿಸಿ ಪ್ರಶಸ್ತಿ ನೀಡಿ ಐಗಳಿ ಪಾಟೀಲ ಸಹೋದರರು ಮಾದರಿಯಾಗಿದ್ದಾರೆ’ ಎಂದು ಕನ್ನಾಳದ ಸಿದ್ಧರಾಮೇಶ್ವರ ಮಠದ ಪೀಠಾಧ್ಯಕ್ಷ ಬಸವಲಿಂಗ ಸ್ವಾಮೀಜಿ ಹೇಳಿದರು.

ಇಲ್ಲಿ ನಡೆದ ಗುರುಪಾದಗೌಡ ಪಾಟೀಲ ದಂಪತಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿವಶಂಕರ ಶರಣರು ಮಾತನಾಡಿ, ‘ತಾಯಿ-ತಂದೆಯೇ ದೇವರು. ಅವರನ್ನೇ ಪೂಜಿಸಬೇಕು. ಅವರ ಸೇವೆಯಿಂದ ತೃಪ್ತಿ ದೊರೆಯುತ್ತದೆ’ ಎಂದರು.

ಅಡಹಳಟ್ಟಿಯ ಕೃಷಿಕ ಅಪ್ಪಾಸಾಬ ಕಾಡಪ್ಪ ಕಲಮಡಿ ಅವರಿಗೆ 2021ನೇ ಸಾಲಿನ ‘ಗುರುಶ್ರೀ ಪ್ರಶಸ್ತಿ’ಯನ್ನು ಪಾಟೀಲ ಸಹೋದರರಾದ ಸಿದಗೌಡ, ನಿಂಗನಗೌಡ, ಮಲಗೌಡ, ಬಸಗೌಡ ಪಾಟೀಲರು ಹಾಗೂ ಶ್ರೀಗಳು ಪ್ರದಾನ ಮಾಡಿದರು.

ಶಿಕ್ಷಕ ನಿಂಗನಗೌಡ ಪಾಟೀಲ, ಕೋಹಳ್ಳಿಯ ಪರಶುರಾಮ ಮಹಾರಾಜರು, ಯಲಹಡಗಿಯ ಬಾಳು ಮಹಾರಾಜರು, ಪಡತಾರವಾಡಿಯ ಶಂಕರ ಮಹಾರಾಜ ಮಾತನಾಡಿದರು.

ಸಿಪಿಐ ಮಲ್ಲಿಕಾರ್ಜುನ ಸಿಂಧೂರ, ಸಮಾಜದ ಉಪಾಧ್ಯಕ್ಷ ಸುನೀಲಗೌಡ ಪಾಟೀಲ, ನಿವೃತ್ತ ಪ್ರಾಚಾರ್ಯ ಎಸ್.ವೈ. ಅಂಬಿಗೇರ, ರವಿಂದ್ರ ಹಾಲಳ್ಳಿ ಹಾಗೂ ಗ್ರಾ.ಪಂ. ಸದಸ್ಯರನ್ನು ಸತ್ಕರಿಸಿದರು.

ಸಿದಗೌಡ ಪಾಟೀಲ ದಂಪತಿ ಗದ್ದುಗೆ ಪೂಜೆ ನೆರವೇರಿಸಿದರು. ಚನ್ನಪ್ಪ ಹಾಲಳ್ಳಿ, ರುದ್ರಯ್ಯ ಹಿರೇಮಠ, ಮಹಾದೇವ ಹಾಲಳ್ಳಿ, ಡಾ.ಸಿ. ಪಾಟೀಲ, ಡಾ.ಬಸಗೌಡ ಪಾಟೀಲ, ಡಾ.ಈರಗೌಡ ಪಾಟೀಲ, ಎಲ್.ಎಸ್. ಬಿರಾದಾರ, ಸಿ.ಕೆ. ಬೆಳಗಲಿ, ಸಿದ್ರಾಮ ಸಿಂದೂರ, ಎಸ್.ಎಂ. ಜನಗೌಡ, ಅಶೋಕ ಪಾಟೀಲ (ಕನ್ನಾಳ), ವೆಂಕಣ್ಣ ಅಸ್ಕಿ, ಶೇಖರ ವಳಸಂಗ, ಅಪ್ಪಾಸಾಬ ಕಾಡಗೊಂಡ, ಹಣಮಂತ ಕರಿಗಾರ, ಬಸವಂತ ಗುಡ್ಡಾಪೂರ, ಗ್ರಾಮ ಲೆಕ್ಕಾಧಿಕಾರಿ ಕಲ್ಮೇಶ ಕಲಮಡಿ ಇದ್ದರು.

ಕೆ.ಎಸ್. ಬಿರಾದಾರ ಸ್ವಾಗತಿಸಿದರು. ಮಲಗೌಡ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT