ಐಗಳಿ: ‘ಧರ್ಮದ ಹಾದಿಯಲ್ಲೇ ಸಾಗಬೇಕು. ಇಲ್ಲದಿದ್ದರೆ ಮೋಕ್ಷ ಸಿಗದು’ ಎಂದು ಮುತ್ತೂರಿನ ಗುರುಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಇಲ್ಲಿನ ಸಿಂಧೂರ ವಸತಿಯಲ್ಲಿ ಅಪ್ಪಯ್ಯ ಸ್ವಾಮಿ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಥಮ ಶಿವಾನುಭವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಸಾಧ್ಯವಾದಷ್ಟು ಉತ್ತಮ ಕೆಲಸಗಳನ್ನು ಮಾಡಬೇಕು. ಎಷ್ಟು ವರ್ಷ ಬದುಕಿದ್ದೇವೆ ಎಂಬುದು ಮುಖ್ಯವಲ್ಲ. ಇನ್ನೊಬ್ಬರಿಗೆ ಎಷ್ಟು ಸಹಾಯ ಮಾಡಿದ್ದೇವೆ ಎಂಬುದೇ ಮುಖ್ಯ’ ಎಂದರು.

ಡಾ. ಬಸಗೌಡ ಪಾಟೀಲ ಮಾತನಾಡಿ, ‘ಎಲ್ಲ ಸಂಪತ್ತಿಗಿಂತ ಶರೀರ ಸಂಪತ್ತೇ ಲೇಸು. ಪ್ರತಿಯೊಬ್ಬರೂ ಆರೋಗ್ಯಕ್ಕೆ ಒತ್ತು ಕೊಡಬೇಕು. ದುಶ್ಚಟಗಳಿಂದ ದೂರವಿರಬೇಕು’ ಎಂದು ತಿಳಿಸಿದರು.

ಝುಂಜರವಾಡದ ಬಸವರಾಜೇಂದ್ರ ಶರಣರು, ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಮಹಾದೇವ ಹಾಲಳ್ಳಿ ಅಧ್ಯಕ್ಷತೆ ವಹಿಸಿದ್ದರು. ಅಪ್ಪಾಸಾಬ ಪಾಟೀಲ, ಎಂ.ಬಿ. ನೇಮಗೌಡ, ಸುರೇಶ ಬಿಜ್ಜರಗಿ, ನಿಂಗಪ್ಪ ತೆಲಸಂಗ, ರವೀಂದ್ರ ಹಾಲಳ್ಳಿ, ಶ್ರೀಶೈಲ ಮಿರ್ಜಿ, ಜಗದೀಶ ತೆಲಸಂಗ, ಕೇದಾರಿ ಬಿರಾದಾರ, ಮಲಗೌಡ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.