ಶುಕ್ರವಾರ, ಜನವರಿ 17, 2020
24 °C

ಮೋದಿಯವರೇ ನಿದ್ರೆಯಿಂದ ಎಚ್ಚರಗೊಳ್ಳಿ: ಪ್ರತಿಭಟನಾಕಾರರಿಂದ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ: ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಇಲ್ಲಿ ಕಾರ್ಮಿಕರು ಬುಧವಾರ ಪ್ರತಿಭಟನೆ ನಡೆಸಿದರು.

ಕಾರ್ಮಿಕ ಸಂಘಟನೆಗಳು, ಆಶಾ ಕಾರ್ಯಕರ್ತೆಯರು, ವಿಮಾ ನೌಕರ ಸಂಘದವರು ಡಾ.ಬಿ.ಆರ್. ಅಂಬೇಡ್ಕರ್‌ ವೃತ್ತದ ಬಳಿ ರಸ್ತೆ ತಡೆದು ಪ್ರತಿಭಟಿಸಿದರು. ಪ್ರಧಾನಿ ನರೇಂದ್ರ ಮೋದಿ ಫೋಟೊ ಪ್ರದರ್ಶಿಸಿ, ಸಿಳ್ಳೆ ಹಾಕುವ ಮೂಲಕ ‘ಮೋದಿಯವರೇ ನಿದ್ರೆಯಿಂದ ಎಚ್ಚರಗೊಳ್ಳಿ’  ಎಂದು ಘೋಷಣೆ ಕೂಗಿದರು.

ಸ್ಥಳಕ್ಕೆ ಬಂದ ಶಾಸಕ ಮಹೇಶ ಕುಮಠಳ್ಳಿ, ‘ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಗಮನಸೆಳೆಯುತ್ತೇನೆ’ ಎಂದು ಭರವಸೆ ನೀಡಿದರು.

ಮುಖಂಡರಾದ ಬಸನಗೌಡ ಪಾಟೀಲ, ಮಂಜು ಹೋಳಿಕಟ್ಟಿ, ಮಂಜುನಾಥ ಬಾಡಗಿ, ದೀಪಕ ಶಿಂಧೆ, ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವ ಮಡಿವಾಳ, ಸಂಧ್ಯಾ ಅಂಬೇಕರ, ವಿಶಾಲ ದೊಡಮನಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು