ಬೆಳಗಾವಿ: ‘ವೈದ್ಯ ವಿಜ್ಞಾನವು ಆಧುನಿಕತೆಯ ಆವಿಷ್ಕಾರ ಎಂದೇ ಎಲ್ಲರ ವಾದ. ಆದರೆ, 12ನೇ ಶತಮಾನದ ಬಸವಾದಿ ಶರಣರಿಗೆ ಮಾನವ ಶರೀರದ ರಚನೆ, ಅಂಗಾಂಗಗಳ ಕಾರ್ಯವೈಖರಿ ಮತ್ತು ಭ್ರೂಣಾವಸ್ಥೆಯಿಂದ ಮುಪ್ಪಿನವರೆಗೆ ದೇಹದ ಬದಲಾವಣೆಗಳ ಅರಿವಿತ್ತು. ಇದನ್ನು ಹಲವು ವಚನಗಳಲ್ಲಿ ತಿಳಿಸಿದ್ದಾರೆ’ ಎಂದು ಡಾ.ಭವ್ಯ ಅಶೋಕ ಸಂಪಗಾರ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಈಚೆಗೆ ಜರುಗಿದ ಮಾಸಿಕ ಅನುಭಾವ ಗೋಷ್ಠಿಯಲ್ಲಿ ಅವರು ‘ವಚನ ಸಾಹಿತ್ಯದಲ್ಲಿ ವೈದ್ಯ ವಿಜ್ಞಾನ’ ವಿಷಯ ಕುರಿತು ಮಾತನಾಡಿದ ಅವರು, ‘ಶರಣ ಚಳವಳಿಯು ಅಂದಿನ ಸಮಾಜದ ಹಲವು ಸಮಸ್ಯೆಗಳಿಗೆ ದಿಕ್ಸೂಚಿಯಂತಿದೆ. ವಚನ ಸಾಹಿತ್ಯ ರಚನೆಕಾರರಲ್ಲಿ ಬೆರಳೆಣಿಕೆಯಷ್ಟು ಶರಣರನ್ನು ಹೊರತುಪಡಿಸಿ ಮತ್ತಾರೂ ಸಾಂಪ್ರದಾಯಕ ಶಿಕ್ಷಣವನ್ನು ಪಡೆದವರಾಗಿರಲಿಲ್ಲ. ಆದಾಗ್ಯೂ ಅವರೆಲ್ಲರೂ ಕನ್ನಡ ಸಾಹಿತ್ಯಕ್ಕೆ ಮುಕುಟದಂತಿರುವ ವಚನಗಳನ್ನು ರಚಿಸಿ, ಲೌಖಿಕ ಜೀವನದ ಸತ್ಯಗಳಿಗೆ ಅಲೌಕಿಕ ಆಧ್ಯಾತ್ಮಿಕ ಬೆಳಕು ಚೆಲ್ಲಿದ್ದಾರೆ’ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಜಾಮದಾರ ಮಾತನಾಡಿದರು. ಶಿವಬಸವ ದೇವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸುನಿತಾ ಚಿನಿವಾರ ಹಾಗೂ ಸುವರ್ಣಾ ಬಾಳಿ ಷಟಸ್ಥಲ ಧ್ವಜಾರೋಹಣ ಮಾಡಿದರು. ಇದೇ ಸಂದರ್ಭದಲ್ಲಿ ಬಸವ ಸಂಸ್ಕೃತಿ ಅಭಿಯಾನ ಯಶಸ್ಸಿಗೆ ಶ್ರಮಿಸಿದ ಕಾರ್ಯಕರ್ತರು, ದಾಸೋಹಿಗಳು ಹಾಗೂ ಸಾಧಕರನ್ನು ಗೌರವಿಸಲಾಯಿತು.

ಶೋಭಾ ಶಿವಳ್ಳಿ ಸ್ವಾಗತಿಸಿದರು. ಭಾರತಿ ರಾಮಗುರವಾಡಿ ಕಾರ್ಯಕ್ರಮ ನಿರೂಪಿಸಿದರು. ಅನುಸೂಯಾ ಬಶೆಟ್ಟಿ ವಂದಿಸಿದರು. ಎಸ್.ಜಿ. ಸಿದ್ನಾಳ, ಸಿ.ಎಂ.ಬೂದಿಹಾಳ, ಮುರಿಗೆಪ್ಪ ಬಾಳಿ, ಮೋಹನ ಗುಂಡ್ಲೂರ ಹಲವರು ಇದ್ದರು.

ವಿಚಾರ– ಆಚಾರಗಳಿಂದ ಹುಟ್ಟಿದ ಧರ್ಮವೇ ಲಿಂಗಾಯತ ಧರ್ಮ. ಬಸವಣ್ಣನವರ ಬಗ್ಗೆ ಅರ್ಥವಾದರೆ ಮೂಢನಂಬಿಕೆಗಳು ಮಾಯವಾಗುತ್ತವೆ
ಶಿವಾನಂದ ಜಾಮದಾರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.