ಶುಕ್ರವಾರ, ನವೆಂಬರ್ 22, 2019
22 °C

ಕ್ರೀಡೆ: ಜಿಲ್ಲಾ ಮಟ್ಟಕ್ಕೆ ಆಯ್ಕೆ: ನಂದಗಾಂವ ಶಾಲೆ ವಿದ್ಯಾರ್ಥಿಗಳ ಸಾಧನೆ

Published:
Updated:
Prajavani

ಅಥಣಿ: ತಾಲ್ಲೂಕಿನ ನಂದಗಾಂವ ಗ್ರಾಮದ ಸರ್ಕಾರಿ ನ್ನಡ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಬಾಲಕಿಯರು ಅಥ್ಲೆಟಿಕ್ಸ್‌ ವಿಭಾಗದಲ್ಲಿ ಮತ್ತು ವಾಲಿಬಾಲ್ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸುಶ್ಮಿತಾ ಮಹಾವೀರ ಗುಡೋಡಗಿ (80 ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ), ಭಾಗ್ಯಶ್ರೀ ಕಲ್ಲಪ್ಪ ಗುಮಟಿ (ಉದ್ದ ಜಿಗಿತದಲ್ಲಿ ಪ್ರಥಮ), ಮುಸ್ಕಾನ್ ಗುಲಾಬ ಮುಕ್ಕೇರಿ (ಎತ್ತರ ಜಿಗಿತದಲ್ಲಿ ಪ್ರಥಮ), ಶಿವಾನಂದ ಜೀಲಪ್ಪ ಕಾಂಬಳೆ (ಚಕ್ರ ಎಸೆತದಲ್ಲಿ ಪ್ರಥಮ) ಗೆಲುವು ಸಾಧಿಸಿದ್ದಾರೆ. ಅವರನ್ನು ಮುಖ್ಯಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಶಿಕ್ಷಕರು ಅಭಿನಂದಿಸಿದ್ದಾರೆ.

ಪ್ರತಿಕ್ರಿಯಿಸಿ (+)