ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ: ಶರಣ ಸಂಸ್ಕೃತಿ ಉತ್ಸವ ಫೆ. 19ರಿಂದ

Last Updated 18 ಫೆಬ್ರುವರಿ 2020, 14:49 IST
ಅಕ್ಷರ ಗಾತ್ರ

ಅಥಣಿ: ‘ಇಲ್ಲಿನ ಗಚ್ಚಿನಮಠದಲ್ಲಿ ಪ್ರತಿ ವರ್ಷದಂತೆ ಮಹಾಶಿವರಾತ್ರಿ ಅಂಗವಾಗಿ ಫೆ. 19ರಿಂದ 22ರವರೆಗೆ ಶರಣ ಸಂಸ್ಕೃತಿ ಉತ್ಸವ ಆಯೋಜಿಸಲಾಗಿದೆ’ ಎಂದು ಪೀಠಾಧಿಪತಿ ಶಿವಬಸವ ಸ್ವಾಮೀಜಿ ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘19ರ ಸಂಜೆ 6ಕ್ಕೆ ಯುವಜನ ಮೇಳವಿದ್ದು, ಗದಗ ಎಸ್ಪಿ ಶ್ರೀನಾಥ ಜೋಶಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಭಾಗವಹಿಸುವರು. ಅಂತರ್ಜಾಲ ಮಾಹಿತಿ ತಜ್ಞ ಡಾ.ಅನಂತಪ್ರಭು ಉಪನ್ಯಾಸ ನೀಡುವರು. ಇಳಕಲ್‌ ಗುರುಮಹಾಂತ ಸ್ವಾಮೀಜಿ, ಚಿತ್ರದುರ್ಗದ ಇಮ್ಮಡಿ ಸಿದ್ದರಾಮ ಸ್ವಾಮೀಜಿ, ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು’.

‘20ರ ಸಂಜೆ 6ಕ್ಕೆ ಶರಣ ಸಂಸ್ಕೃತಿ ಉತ್ಸವ ಉದ್ಘಾಟನೆ ನಡೆಯಲಿದೆ. ‘ಜಾಗತಿಕ ಶಾಂತಿ ಮತ್ತು ಪ್ರಗತಿ’ ಕುರಿತು ಚಿಂತನಾ ಗೋಷ್ಠಿ ಇದೆ. ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜೇಯಂದ್ರ ಉದ್ಘಾಟಿಸುವರು. ಉಪ ಮುಖ್ಯಮಂತ್ರಿ ಲಕ್ಷ್ಮಣ ಸಂಗಪ್ಪ ಕ್ಯಾಲೆಂಡರ್‌ ಬಿಡುಗಡೆ ಮಾಡುವರು. ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಸಾನ್ನಿಧ್ಯ ವಹಿಸುವರು’ ಎಂದು ಮಾಹಿತಿ ನೀಡಿದರು.

21ರಂದು ಮಹಾಶಿವರಾತ್ರಿ ಅಂಗವಾಗಿ ಬೆಳಿಗ್ಗೆ 7ಕ್ಕೆ ಸಹಜ ಶಿವಯೋಗ ನಡೆಯಲಿದೆ. 9ಕ್ಕೆ ಸವಧರ್ಮ ಧ್ವಜಾರೋಹಣ, ಪಲ್ಲಕ್ಕಿ ಉತ್ಸವ ನಡೆಯಲಿದೆ. ಮಧ್ಯಾಹ್ನ ಮಹಾಪ್ರಸಾದ ನೀಡಲಾಗುವುದು. ಸಂಜೆ 6ಕ್ಕೆ ‘ಸಾಮಾಜಿಕ ಪರಿವರ್ತನೆಯಲ್ಲಿ ಮುರುಘಾ ಪರಂಪರೆಯ ಪಾತ್ರ’ ಕುರಿತ ಕಾರ್ಯಕ್ರಮದಲ್ಲಿ ಶಿವಮೂರ್ತಿ ಮುರುಘಾ ಶರಣರು, ಧಾರವಾಡದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಶಾಸಕರಾದ ಮಹಾಂತೇಶ ಕೌಜಲಗಿ, ಮಹೇಶ ಕುಮಠಳ್ಳಿ, ಪಿ.ರಾಜೀವ ಭಾಗವಹಿಸುವರು. ಸಾಹಿತಿ ಡಾ.ಕುಂ. ವೀರಭದ್ರಪ್ಪ ವಿಷಯ ಮಂಡಿಸುವರು. ರಾತ್ರಿ 10ರಿಂದ ಬೆಳಿಗ್ಗೆ 7ರವರೆಗೆ ‘ಸಂಗೀತ ಶಿವರಾತ್ರಿ’ ಜರುಗಲಿದೆ 50 ಮಂದಿಯ ತಂಡ ಕಾರ್ಯಕ್ರಮ ನೀಡಲಿದೆ. 22ರ ಬೆಳಿಗ್ಗೆ 7ಕ್ಕೆ ಸಹಜ ಶಿವಯೋಗ, ಸಂಜೆ ಗಚ್ಚಿನಮಠದ ಪೀಠಾಧಿಪತಿ ಲಿಂ.ಸಿದ್ಧಲಿಂಗ ಶ್ರೀಗಳ ಸ್ಮರಣೋತ್ಸವವಿದೆ. ಸಂಜೆ 6ಕ್ಕೆ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ಮುಖಂಡರಾದ ಶಿವು ದಿವಾನಮಳ, ರಾಮಗೌಡ ಪಾಟೀಲ, ರಾಜು ಬಿಳ್ಳೂರು, ಹಣಮಂತ ಕಾವಲೆ, ಶ್ರೀಶೈಲ ಹಳ್ಳದಮಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT