ಶನಿವಾರ, ನವೆಂಬರ್ 23, 2019
18 °C

ಅಥಣಿ: ತಾಲ್ಲೂಕುಮಟ್ಟದ ಕ್ರೀಡಾಕೂಟ

Published:
Updated:
Prajavani

ಅಥಣಿ: ‘ಸೋಲು ಗೆಲುವಿನ ಮೆಟ್ಟಿಲು. ಹೀಗಾಗಿ, ಸ್ಪರ್ಧಿಸುವುದನ್ನು ಬಿಡಬಾರದು’ ಎಂದು ಜೆಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಅರವಿಂದ ದೇಶಪಾಂಡೆ ಸಲಹೆ ನೀಡಿದರು.

ಪದವಿಪೂರ್ವ ಶಿಕ್ಷಣ ಇಲಾಖೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಹಾಗೂ ವಿಮೋಚನಾ ಸಂಘದ ಸಂತರಾಮ ಪಿಯು ಕಾಲೇಜು ವತಿಯಿಂದ ಆಯೋಜಿಸಿದ್ದ ತಾಲ್ಲೂಕುಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

‘ಕ್ರೀಡಾಕೂಟದಲ್ಲಿ ನಿಯಮಗಳನ್ನು ಪಾಲಿಸಬೇಕು. ಪ್ರತಿಭೆ ಪ್ರದರ್ಶನಕ್ಕೆ ಇಂತಹ ವೇದಿಕೆಗಳನ್ನು ಬಳಸಿಕೊಳ್ಳಬೇಕು’ ಎಂದರು.

ಡಿವೈಎಸ್ಪಿ ಎಸ್.ವಿ. ಗಿರೀಶ ಕ್ರೀಡಾ ಜ್ಯೋತಿ ಸ್ವಾಗತಿಸಿದರು.

ವಿಮೋಚನಾ ಸಂಘದ ಅಧ್ಯಕ್ಷ ಬಸವಪ್ರಭು ಎಲ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್‌ ಎಂ.ಎನ್. ಬಳಿಗಾರ, ತಾಲ್ಲೂಕು ಪಂಚಾಯ್ತಿ ಇಒ ರವಿ ಬಂಗಾರಪ್ಪನವರ, ಬಿಇಒ ಸಿ.ಎಂ. ನೇಮಗೌಡ, ಸಿಡಿಪಿಒ ಉದಯಗೌಡ ಪಾಟೀಲ, ತಾಲ್ಲೂಕು ಕ್ರೀಡಾ ಅನುಷ್ಠಾನಾಧಿಕಾರಿ ನಾಮದೇವ ಮಿರಜ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಅರ್ಜುನ ಬಡಿಗೇರ, ನೋಡಲ್‌ ಅಧಿಕಾರಿ ಮಲ್ಲಿಕಾರ್ಜುನ ಎಚ್.ಎ., ಜಿ.ಎ.. ಚನಗೊಂಡ, ವಿಮೋಚನಾ ಸಂಘದ ಸದಸ್ಯರಾದ ಅರ್ಮುಗಂ ಕಾರ್ತಿ, ಶಿವಪುತ್ರ ಯಾದವಾಡ, ಮಂಜುನಾಥ ಪಾಟೀಲ, ಎಂ.ಬಿ. ತೋಟಗಿ ಇದ್ದರು.

ಸಂತರಾಮ ಪಿಯು ಕಾಲೇಜಿನ ಪ್ರಾಚಾರ್ಯರಾದ ಡಾ.ಭಾರತಿ ವಿಜಾಪುರೆ ಸ್ವಾಗತಿಸಿದರು. ಎ.ಎಸ್. ಕಾರೆ ನಿರೂಪಿಸಿದರು. ಎಂ.ಎಸ್. ಅಸ್ಕಿ ವಂದಿಸಿದರು.

ಪ್ರತಿಕ್ರಿಯಿಸಿ (+)