ಬುಧವಾರ, ಆಗಸ್ಟ್ 21, 2019
25 °C

ಆಕರ್ಷಕ ಪಥಸಂಚಲನ, ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ

Published:
Updated:

ಬೆಳಗಾವಿ: ಜಿಲ್ಲಾಡಳಿತದಿಂದ ಗುರುವಾರ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸಲಾಯಿತು.

ಶಿವಪ್ಪ ಹನುಮಂತ ಅನಿಗೇರಿ, ರಾಜೇಂದ್ರ ಎಫ್.ಎಫ್. ಕರಲಿಂಗಣ್ಣವರ, ಗಂಗಪ್ಪ ಮುದಪ್ಪ ಮಾಳಗಿ, ಆರ್.ಡಿ. ಕಲಘಟಗಿ, ಎ.ಆರ್. ಮೇಟಿ ಅವರನ್ನು ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಮೊದಲಾದ ಅಧಿಕಾರಿಗಳು ಸನ್ಮಾನಿಸಿದರು.

ಎ.ಎಸ್. ಬೂದಿಗೊಪ್ಪ ನೇತೃತ್ವದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಕೆಎಸ್‌ಆರ್‌ಪಿ, ಸಶಸ್ತ್ರ ಪೊಲೀಸ್, ಕೈಗಾರಿಕಾ ಭದ್ರತಾ ಪಡೆ, ಮಹಿಳಾ ಪೊಲೀಸ್, ಅರಣ್ಯ ಇಲಾಖೆ, ಗೃಹರಕ್ಷಕ ದಳ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ, ಮಾಹೇಶ್ವರಿ ಅಂಧ ಮಕ್ಕಳ ಶಾಲಾ ತಂಡದವರು ಪಾಲ್ಗೊಂಡಿದ್ದರು.

ಬಹುಮಾನ: ಸಶಸ್ತ್ರಧಾರಿಗಳ ವಿಭಾಗದಲ್ಲಿ ಸಿ.ಎ.ಆರ್. ಬೆಳಗಾವಿ ವಿಭಾಗ ಪ್ರಥಮ, ಡಿ.ಎ.ಆರ್. ಬೆಳಗಾವಿ ಹಾಗೂ ಸಂಚಾರಿ ಪಡೆ ದ್ವಿತೀಯ, ಸಮವಸ್ತ್ರಧಾರಿಗಳ ವಿಭಾಗದಲ್ಲಿ ಅಬಕಾರಿ ಇಲಾಖೆ ತುಕಡಿ ಪ್ರಥಮ, ಮಹಿಳಾ ಪೊಲೀಸ್ ವಿಭಾಗದಲ್ಲಿ ಕೆಎಸ್‌ಆರ್‌ಪಿ ಮಹಿಳಾ ಪಡೆ ಪ್ರಥಮ, ಎನ್‌ಸಿಸಿ ವಿಭಾಗದಲ್ಲಿ ಎನ್‌ಸಿಸಿ 8ನೇ ಬಿ.ಎನ್. ಏರ್‌ಸ್ಕ್ವಾಡ್ ಪ್ರಥಮ ಹಾಗೂ ಎನ್‌ಸಿಸಿ 26ನೇ ಬಿ.ಎನ್. ಏರ್‌ವಿಂಗ್ ಸೀನಿಯರ್ ದ್ವಿತೀಯ ಬಹುಮಾನ ಪಡೆದವು. ಭಾರತ ಸೇವಾದಳ ವಿಭಾಗದಲ್ಲಿ ಅಗಸಗಾ ಪ್ರೌಢಶಾಲೆ ಪ್ರಥಮ ಹಾಗೂ ಮಹಿಳಾ ವಿದ್ಯಾಲಯ ದ್ವಿತೀಯ, ಶಾಲಾ ತಂಡಗಳ ವಿಭಾಗದಲ್ಲಿ ಸರ್ಕಾರಿ ಪ್ರೌಢಶಾಲೆ ಎಸ್.ಪಿ.ಸಿ. ವಡಗಾವಿ, ಮಾ‌ಹೇಶ್ವರಿ ಅಂಧ ಮಕ್ಕಳ ಶಾಲೆ ದ್ವಿತೀಯ, ಪೊಲೀಸ್ ಬ್ಯಾಂಡ್ ವಿಶೇಷ ಬಹುಮಾನ ಪಡೆದವು.

Post Comments (+)