ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ‘ಶಕ್ತಿ’ ಯೋಜನೆ ಕೈಬಿಡಲು ಆಟೊ ಚಾಲಕರ ಆಗ್ರಹ

Published 15 ಜೂನ್ 2023, 16:40 IST
Last Updated 15 ಜೂನ್ 2023, 16:40 IST
ಅಕ್ಷರ ಗಾತ್ರ

ಬೆಳಗಾವಿ: ನಗರ ಪ್ರದೇಶದಲ್ಲಿ ‘ಶಕ್ತಿ’ ಯೋಜನೆ ಕೈ ಬಿಡಬೇಕು ಎಂದು ಆಗ್ರಹಿಸಿ 500ಕ್ಕೂ ಹೆಚ್ಚು ಆಟೊಗಳನ್ನು ಕೆಲಕಾಲ ರಸ್ತೆ ಮಧ್ಯೆ ನಿಲ್ಲಿಸಿ ಆಟೊ ಚಾಲಕರು ಹಾಗೂ ಮಾಲೀಕರು ಗುರುವಾರ ಕೇಂದ್ರ ಬಸ್‌ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.

‘ಬೆಳಗಾವಿ ನಗರದಿಂದ ಹೊರಗಡೆ ಸಂಚರಿಸುವ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಿ. ಆದರೆ, ನಗರದ ಆಟೊಗಳು ಓಡುವುದೇ ಮಹಿಳೆಯರನ್ನು ಅವಲಂಬಿಸಿ. ಬೆಳಗಾವಿ ನಗರದಲ್ಲಿ  ಪರವಾನಗಿ ಇರುವ 10 ಸಾವಿರಕ್ಕೂ ಹೆಚ್ಚು ಆಟೊಗಳಿವೆ. ಉಚಿತ ಪ್ರಯಾಣದ ಕಾರಣ ಮಹಿಳೆಯರು ಆಟೊಗಳಿಂದ ದೂರವಾಗಿದ್ದಾರೆ. ಇದರಿಂದ ನಮ್ಮ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ’ ಎಂದು ಚಾಲಕ ಜಾವೇದ್‌ ಹುಬ್ಬಳ್ಳಿ ದೂರಿದರು.

‘ಉಚಿತ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ, ನಗರದಲ್ಲಿ ಇದಕ್ಕೆ ಅವಕಾಶ ನೀಡಬಾರದು. ಪುರುಷರು ಬೈಕು, ಕಾರುಗಳಲ್ಲಿ ಓಡಾಡುತ್ತಾರೆ. ವಿದ್ಯಾರ್ಥಿಗಳಿಗೆ ಪಾಸ್‌ಗಳಿವೆ. ಆಟೊಗಳಲ್ಲಿ ಓಡಾಡುವುದು ಮಹಿಳೆಯರು ಮಾತ್ರ. ಈಗ ಅವರೂ ಇಲ್ಲದಿದ್ದರೆ ನಮ್ಮ ಉಪಜೀವನ ಕಷ್ಟವಾಗುತ್ತದೆ. ಈ ಬಗ್ಗೆ ಜೂನ್‌ 23ರೊಳಗೆ ನಿರ್ಧಾರ ಪ್ರಕಟಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT