ಶನಿವಾರ, ಮಾರ್ಚ್ 6, 2021
19 °C

‘ಯಾರಿಗೂ ತೊಂದರೆಯಾಗದಂತೆ ಬದುಕುವುದೇ ಬಸವ ಧರ್ಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘‌ಯಾರಿಗೂ ತೊಂದರೆಯಾಗದಂತೆ ಸರಳ ಮತ್ತು ಸಜ್ಜನಿಕೆಯಿಂದ ಬದುಕುವುದೇ ಬಸವ ಮಾರ್ಗ’ ಎಂದು ನಗರಪಾಲಿಕೆ ನಿವೃತ್ತ ಅಧಿಕಾರಿ ಡಿ.ಕೆ. ನಿಂಬಾಳ ಹೇಳಿದರು.

ಬಸವ ಭೀಮ ಸೇನೆಯು ಬಸವೇಶ್ವರ ಉದ್ಯಾನದಲ್ಲಿ ಸೋಮವಾರ ಆಯೋಜಿಸಿದ್ದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಸವಣ್ಣನ ತತ್ವ–ಸಿದ್ಧಾಂತಗಳ ಪ್ರತಿಪಾದನೆಯೊಂದಿಗೆ ಶರಣರ ಸಮ ಸಮಾಜದ ತತ್ವಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.

ವಕೀಲ ಚನ್ನಬಸಪ್ಪ ಬಾಗೇವಾಡಿ, ‘ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆ ಇನ್ನೂ ಸಿಕ್ಕಿಲ್ಲ. ನಾವು ನಿರಾಶಾವಾದಿಗಳಲ್ಲ. ನ್ಯಾಯಾಂಗದ ಮೇಲೆ ಸಂಪೂರ್ಣ ಭರವಸೆ ಇದೆ. ಮಾನ್ಯತೆ ದೊರೆಯುವ ವಿಶ್ವಾಸವಿದೆ’ ಎಂದರು.

ಬಸವ ಭೀಮ ಸೇನೆ ಅಧ್ಯಕ್ಷ ಆರ್.ಎಸ್. ದರ್ಗೆ ಮಾತನಾಡಿ, ‘ಬಹು ಭಾಷಾ ಮತ್ತು ಸಂಸ್ಕೃತಿಯ ಈ ದೇಶವನ್ನು ಹಿಂದುತ್ವದ ಅಡಿಯಲ್ಲಿ ಕಟ್ಟಲು ಸಾಧ್ಯವಿಲ್ಲ. ಎಲ್ಲ ಶೋಷಿತ ಸಮುದಾಯಗಳ ಕಾಯಕ ಜೀವಿಗಳನ್ನು ಗೌರವಿಸುವ ಬಸವ ಮಾರ್ಗದಿಂದ ಮಾತ್ರ ಸುಭದ್ರ ಭಾರತ ನಿರ್ಮಿಸಬಹುದು. ಭಾರತ ಬಸವ ಭಾರತವಾಗಬೇಕು’ ಎಂದು ಹೇಳಿದರು.

ಮುಖಂಡರಾದ ಬಸವರಾಜ ರೊಟ್ಟಿ, ರಾಜಶೇಖರ ಭೋಜ, ಸಿದಗೌಡ ಮೋದಗಿ, ರಾಜು ಕುಂದಗೋಳ, ಬಿ.ಎ. ಪಾಟೀಲ, ಸಿದ್ರಾಮ ಸಾವಳಗಿ, ಆಕಾಶ ಹಲಗೇಕರ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.