ಭಾನುವಾರ, ಸೆಪ್ಟೆಂಬರ್ 15, 2019
26 °C

ಬೆಳಗಾವಿ: ನೆರೆ ಪರಿಹಾರ ಕೇಂದ್ರದಲ್ಲಿದ್ದ ಬಾಲಕ ಸಾವು

Published:
Updated:

ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸುರೇಬಾನ ಎಪಿಎಂಸಿ ಆವರಣದಲ್ಲಿನ ಪರಿಹಾರ ಕೇಂದ್ರದಲ್ಲಿದ್ದ ಬಾಲಕ ಜ್ವರದಿಂದ ಸೋಮವಾರ ರಾತ್ರಿ ಮೃತಪಟ್ಟಿದ್ದಾನೆ.

ಅಬ್ದುಲ್ ಸಾಬ್ ಮುಲ್ಲಾನವರ (5) ಮೃತ. 

ದೊಡ್ಡ ಹಂಪಿಹೊಳಿ ಗ್ರಾಮದಲ್ಲಿ ಮನೆ ಬಿದ್ದಿರುವುದರಿಂದ ಮುಲ್ಲಾನವರ ಕುಟುಂಬ ಪರಿಹಾರ ಕೇಂದ್ರದಲ್ಲಿ ಒಂದು ತಿಂಗಳಿನಿಂದ ಆಶ್ರಯ ಪಡೆದಿದೆ. ಬಾಲಕನಿಗೆ ಜ್ವರ ಬಂದಾಗ ಚಿಕಿತ್ಸೆಗಾಗಿ ಪೋಷಕರು ಪರದಾಡಿದ್ದರು. ಅಧಿಕಾರಿಗಳಿಂದ ಸ್ಪಂದನೆ ದೊರೆತಿರಲಿಲ್ಲ ಎಂದು ಆರೋಪಿಸಲಾಗುತ್ತಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಧ್ಯಾಹ್ನ ನೆರೆ ಸಂತ್ರಸ್ತರ ಕುಂದುಕೊರತೆ ಆಲಿಸಲು ಬರಲಿದ್ದಾರೆ. ಈ ವೇಳೆ ಸುರೇಬಾನ ಪರಿಹಾರ ಕೇಂದ್ರಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ.

Post Comments (+)