ಅಥಣಿ: ‘ಕೋವಿಡ್ ಸಂದರ್ಭದಲ್ಲಿ ಅತೀ ಹೆಚ್ಚು ನೋವು ಅನುಭವಿಸಿದ್ದು ಖಾಸಗಿ ಶಾಲಾ ಶಿಕ್ಷಕರೇ, ಈ ರಾಜ್ಯದಲ್ಲಿ ಅತೀ ಹೆಚ್ಚಿನ ಅಂಕಗಳನ್ನು ಪಡೆಯುವ ಮಕ್ಕಳಿಗೆ ಪಾಠ ಮಾಡ್ತಾ ಇರೋದೆ ಖಾಸಗಿ ಶಿಕ್ಷಣ ಸಂಸ್ಥೆಗಳು’ ಎಂದು ಖಾಸಗಿ ಅನುದಾನ ರಹಿತ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಹೇಳಿದರು.

ಸ್ಥಳೀಯ ವಿದ್ಯಾವರ್ಧಕ ಶಾಲೆಯಲ್ಲಿ ಅಥಣಿ ತಾಲ್ಲೂಕಾ ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರಿಗೆ ಶನಿವಾರ ನಡೆದ ವಿಚಾರ ಸಂಕೀರ್ಣ ಹಾಗೂ ಗುರುಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಎಲ್ಲ ಶಿಕ್ಷಕರು ತಮ್ಮ ವೃತ್ತಿಯ ಧರ್ಮವನ್ನು ಕಾಪಾಡಿಕೊಂಡು ಕಾರ್ಯ ನಿರ್ವಹಿಸಬೇಕು ಎಂದರು

‘ಸರ್ಕಾರಿ ಶಾಲೆಗೆ ಯಾವುದೇ ನಿಯಮಗಳು ಇಲ್ಲದಿದ್ರೂ ನಡೆಯುತ್ತವೆ. ಆದರೆ ಖಾಸಗಿ ಶಾಲೆಗಳಿಗೆ ಮಾತ್ರ ಎಲ್ಲ ರೀತಿಯ ವ್ಯವಸ್ಥೆಯನ್ನು ಕೇಳಿ ಅಧಿಕಾರಿಗಳು ಮಲತಾಯಿ ಧೋರಣೆಯನ್ನು ಮಾಡುತ್ತಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯ ನಿಯಮಗಳ ಪ್ರಕಾರ ಕರ್ನಾಟಕದಲ್ಲಿ ಕೆಲಸ ನಿರ್ವಹಿಸಲು ಶಿಕ್ಷಕರ ಅವಶ್ಯಕತೆ ಇದೆ. 2017-18ರ ನಂತರ ಹೊಸ ಶಾಲೆಗಳನ್ನು ಪ್ರಾರಂಭಿಸಲು ಹಲವಾರು ಕಠಿಣ ನಿಯಮಗಳನ್ನು ಹೇರಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ’ ಎಂದು ದೂರಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಬಿ ಮೊರಟಗಿ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮ ಕರ್ತವ್ಯ. ಖಾಸಗಿ ಶಾಲೆಗಳು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವುದು ಖುಷಿಯ ವಿಚಾರ, ಕಾನೂನು ಚೌಕಟ್ಟಿನ ಒಳಗೆ ಶಿಕ್ಷಣ ಇಲಾಖೆಯ ನಿಯಮಗಳಿಗೆ ಬದ್ಧರಾಗಿ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು’ ಎಂದರು.

ಮುಖಂಡ ಶಿವಾನಂದ ಗುಡ್ಡಾಪೂರ ಮಾತನಾಡಿ, ‘ರಾಜ್ಯದಲ್ಲೇ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಖಾಸಗಿ ಶಾಲೆಗಳ ಶಿಕ್ಷಕರೇ ದೇಶದ ಆಸ್ತಿ, ಅವರುಗಳಿಗೆ ನಾವೆಲ್ಲ ಸಹಕಾರ ಕೊಟ್ಟು ದೇಶಕ್ಕೆ ಭದ್ರ ಬುನಾದಿ ಒದಗಿಸೋಣ’ ಎಂದರು.

ಸುರೇಶ ಚಿಕ್ಕಟ್ಟಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ಸುನೀಲ ಶಿವಣಗಿ, ಎಲ್.ಎನ್ ಬಣಜವಾಡ, ರಮೇಶ ಬುಲಬುಲೆ, ಎಸ್.ಎಮ್ ಲಕ್ಷ್ಮೇಶ್ವರ, ಡಿ.ಡಿ ಮೇಕನಮರಡಿ, ಕೆ.ವಿ ಯಾದವಾಡ, ರಾವಸಾಬ ಐಹೋಳೆ, ಚಿದಾನಂದ ಪಾಟೀಲ, ಕೆ.ಬಿ ಜಾಲವಾದಿ, ಎ.ಎಸ್ ಜೋಶಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.