ಗುರುವಾರ , ನವೆಂಬರ್ 14, 2019
19 °C

ಕುಸಿದ ರಸ್ತೆ: ತಪ್ಪಿದ ಭಾರಿ ಅನಾಹುತ

Published:
Updated:

ಬೆಳಗಾವಿ: ನಗರದಿಂದ ಹುಕ್ಕೇರಿ ತಾಲ್ಲೂಕು ಪಣಗುತ್ತಿ ಗ್ರಾಮಕ್ಕೆ ಸೋಮವಾರ ತೆರಳುತ್ತಿದ್ದ ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ ಬಸ್‌ ತಾಲ್ಲೂಕಿನ ಹೊಸ ವಂಟಮೂರಿ ಬಳಿ ರಸ್ತೆ ಕುಸಿದು ಸಿಲುಕಿಕೊಂಡಿದೆ.

ಭೂ ಕುಸಿತದಿಂದ ಬಸ್‌ನ ಮುಂಭಾಗ ಭಾಗಶಃ ಭೂಮಿ ಒಳಗೆ ಸೇರಿಕೊಂಡಿದೆ. ಬಸ್‍ನಲ್ಲಿದ್ದ ಪ್ರಯಾಣಿಕರು ಕೂಡಲೇ ಕೆಳಗಿಳಿದಿದ್ದಾರೆ.

ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಪ್ರಾಣ ಹಾನಿ ಸಂಭವಿಸಿಲ್ಲ. ರಸ್ತೆ ಏಕಾಏಕಿ ಕುಸಿದಿದ್ದರಿಂದ ಈ ಅನಾಹುತ ಸಂಭವಿಸಿದೆ.

ಪ್ರತಿಕ್ರಿಯಿಸಿ (+)