ಭಾನುವಾರ, ಸೆಪ್ಟೆಂಬರ್ 15, 2019
26 °C

ಸ್ಮಾರ್ಟ್‌ ಬೈಸಿಕಲ್ ಪಥ ನಿರ್ಮಾಣ: ಶಾಸಕ ಅಭಯ ಪಾಟೀಲ

Published:
Updated:
Prajavani

ಬೆಳಗಾವಿ: ‘ಸ್ಮಾರ್ಟ್‌ ಸಿಟಿಯಾಗಿ ರೂಪುಗೊಳ್ಳುತ್ತಿರುವ ನಗರಲ್ಲಿ ‘ಸ್ಮಾರ್ಟ್‌ ಬೈಸಿಕಲ್‌ ಪಥ’ ನಿರ್ಮಿಸಲಾಗುವುದು. ಎಲೆಕ್ಟ್ರಿಕ್‌ ಬೈಸಿಕಲ್ ಹಾಗೂ ಸ್ಕೂಟರ್‌ಗಳನ್ನು ಜನರು ಬಾಡಿಗೆಗೆ ನೀಡುವ ಉಪಯೋಗಿಸಲು ಅನುಕೂಲ ಮಾಡಿಕೊಡುವ ಯೋಜನೆ ರೂಪಿಸಲಾಗುತ್ತಿದೆ’ ಎಂದು ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.

‘ಈ ನಿಟ್ಟಿನಲ್ಲಿ ಭಾನುವಾರ ಸ್ಮಾರ್ಟ್‌ ಸಿಟಿ ಯೋಜನೆಯ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್‌ ಸಿಂಗ್ ಅವರೊಂದಿಗೆ ಚರ್ಚಿಸಲಾಗಿದೆ. ಆದಷ್ಟು ಬೇಗ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿದೆ’ ಎಂದಿದ್ದಾರೆ.

‘ಆ್ಯಪ್‌ ಸಿದ್ಧಪಡಿಸಿ ಮೊಬೈಲ್‌ನಲ್ಲಿ ಬಾಡಿಗೆ ಹಣ ಪಾವತಿಸುವ ವ್ಯವಸ್ಥೆ ಮಾಡಲಾಗುವುದು. ಮುಂದಿನ ವರ್ಷದ ವೇಳೆಗೆ ಜನರಿಗೆ ಇದನ್ನು
ಸಮರ್ಪಿಸಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

Post Comments (+)