ಗುರುವಾರ , ಜುಲೈ 29, 2021
23 °C

ಆರ್‌ಎಲ್‌ ಪಿಯು ಕಾಲೇಜು: ಫಲಿತಾಂಶ ವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಇಲ್ಲಿನ ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ಪದವಿಪೂರ್ವ ವಿಜ್ಞಾನ (ಆರ್‌ಎಲ್‌ಎಸ್‌) ಕಾಲೇಜಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಫಲಿತಾಂಶವು ಹಿಂದಿನ ವರ್ಷಗಳಿಗಿಂತಲೂ ಅತ್ಯುತ್ತಮವಾಗಿದೆ’ ಎಂದು ಪ್ರಾಂಶುಪಾಲ ಎಸ್.ಜಿ. ನಂಜಪ್ಪನವರ ತಿಳಿಸಿದ್ದಾರೆ.

‘ಹಾಜರಾಗಿದ್ದ 543 ವಿದ್ಯಾರ್ಥಿಗಳ ಪೈಕಿ 519 ಮಂದಿ ಉತ್ತೀರ್ಣರಾಗಿದ್ದು, ಶೇ 95.6ರಷ್ಟು ಫಲಿತಾಂಶ ಬಂದಿದೆ. 126 ವಿದ್ಯಾರ್ಥಿಗಳು ಪ್ರಶಸ್ತಿಸಹಿತ ಪ್ರಥಮಶ್ರೇಣಿ (ಡಿಸ್ಟಿಂಕ್ಷನ್), 342 ಮಂದಿ ಪ್ರಥಮ, 27 ವಿದ್ಯಾರ್ಥಿಗಳು ದ್ವಿತೀಯ ಮತ್ತು ನಾಲ್ವರು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶಿವಾನಿ ದೀಪಕ ರಜಾಯಿಕರ 585 ಅಂಕಗಳನ್ನು ಗಳಿಸಿ ಕಾಲೇಜಿನ ಟಾಪರ್ ಎನಿಸಿದ್ದಾರೆ. ಓಂಕಾರ ಭೀಮರಾವ್ ಸಾವಂತ (575), ಅನಿಕಾ ರಮೇಶ ನಾಯಕ ಮತ್ತು ಪ್ರದ್ಯುಮ್ನ ಜೋಶಿ ತಲಾ 574 ಅಂಕಗಳನ್ನು ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಭೌತವಿಜ್ಞಾನದಲ್ಲಿ ಮೂವರು, ರಸಾಯನವಿಜ್ಞಾನದಲ್ಲಿ ಒಬ್ಬರು, ಗಣಿತದಲ್ಲಿ 13, ಜೀವಶಾಸ್ತ್ರದಲ್ಲಿ ಒಬ್ಬರು ಹಾಗೂ ಹಿಂದಿ ವಿಷಯದಲ್ಲಿ ಇಬ್ಬರು ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.