ಬೆಳಗಾವಿ: ಮಹಿಳಾ ಅಧಿಕಾರಿಯೊಬ್ಬರ ಖಾಸಗಿತನದ ವಿಡಿಯೊಗಳನ್ನು ಸೆರೆಹಿಡಿದು ₹50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಮೂವರು ಯೂಟ್ಯೂಬರ್ಗಳನ್ನು, ಹೆಚ್ಚಿನ ತನಿಖೆಗಾಗಿ ಪೊಲೀಸರು ಗುರುವಾರದಿಂದ ಮೂರು ದಿನ ಕಸ್ಟಡಿಗೆ ಪಡೆದರು.

ಗೋಕಾಕನ ಅಬ್ದುಲ್ ರಷೀದ್ ನಜರ್ ಅಹಮದ್ ಮಕಾನದಾರ (51), ಸಮೀರ್ ನಿಸಾರ್ ಅಹಮದ್ ಶೇಖ್ (32) ಮತ್ತು ಗೋಕಾಕ ತಾಲ್ಲೂಕು ಘಟಪ್ರಭಾದ ಮೊಹಮ್ಮದ್ ದಿಲಾವರ ನಜೀರ್ಅಹಮದ್ ಬಾಳೇಕುಂದ್ರಿ (45) ಅವರನ್ನು ಮಾಳಮಾರುತಿ ಠಾಣೆ ಪೊಲೀಸರು ಇಲ್ಲಿನ 2ನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

‘ಇವರ ಮೊಬೈಲುಗಳಲ್ಲಿ ಮತ್ತಷ್ಟು ಜನರ ಖಾಸಗಿತನದ ದೃಶ್ಯಾವಳಿಗಳು ಲಭ್ಯವಾಗಿವೆ. ಇದೊಂದು ವ್ಯವಸ್ಥಿತ ಜಾಲದಂತಿದೆ. ಮೂವರನ್ನು ತನಿಖೆಗೆ ಒಳಪಡಿಸಿದರೆ ಮತ್ತಷ್ಟು ಮಾಹಿತಿ ಲಭಿಸಲಿದೆ. ಅಲ್ಲದೇ, ಈ ಕೃತ್ಯದ ಹಿಂದೆ ಇರುವ ಪ್ರಮುಖ ಆರೋಪಿಯನ್ನು ಪತ್ತೆ ಮಾಡಲು ಸಾಧ್ಯವಾಗಲಿದೆ’ ಎಂದು ಕೋರಿದರು.

ಪ್ರಕರಣದಲ್ಲಿ ಮಹಿಳಾ ಅಧಿಕಾರಿ ಕೆಲಸ ಮಾಡುತ್ತಿದ್ದ ಕಚೇರಿಯ ಇನ್ನೊಬ್ಬ ಅಧಿಕಾರಿಯನ್ನೂ ಬಂಧಿಸಲಾಗಿದೆ. ಮಹಿಳಾ ಅಧಿಕಾರಿ ತಮ್ಮ ಆಪ್ತನೊಂದಿಗೆ ಮನೆಯಲ್ಲಿ ಕಳೆದ ಖಾಸಗಿ ಕ್ಷಣಗಳನ್ನು ಇವರು 11 ರಹಸ್ಯ ಕ್ಯಾಮೆರಾಗಳಲ್ಲಿ ಸೆರೆ ಹಿಡಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.