ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಪ್ರಭಾಕರ ಕೋರೆ ಭೇಟಿಯಾದ ಶೆಟ್ಟರ್‌

Published 31 ಮಾರ್ಚ್ 2024, 6:24 IST
Last Updated 31 ಮಾರ್ಚ್ 2024, 6:24 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಮತ್ತು ಬಿಜೆಪಿ ನಾಯಕ ಪ್ರಭಾಕರ ಕೋರೆ ಅವರನ್ನು ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಿದರು.

‘ಟಿಕೆಟ್ ಹಂಚಿಕೆ ವೇಳೆ ಪ್ರಭಾಕರ ಕೋರೆ ಮುನಿಸಿಕೊಂಡಿದ್ದರು. ಟಿಕೆಟ್‌ ಸಿಗದ್ದರಿಂದ ಬೆಳಗಾವಿಯ ಸ್ಥಳೀಯ ಮುಖಂಡರು ಅವರ ಮನೆಯಲ್ಲೇ ಸಭೆ ನಡೆಸಿದ್ದರು’ ಎಂಬ ಹಿನ್ನೆಲೆಯಲ್ಲಿ, ಜಗದೀಶ ಶೆಟ್ಟರ್ ಅವರ ಇಂದಿನ ಭೇಟಿ ಮಹತ್ವ ಪಡೆದುಕೊಂಡಿದೆ.

‘ಕೋರೆ ಅವರ ಮನೆಗೆ ಆಗಮಿಸಿದ್ದ ಶೆಟ್ಟರ್‌, ಚುನಾವಣೆ ರಣತಂತ್ರ, ವಿರೋಧ ಪಕ್ಷದವರನ್ನು ಎದುರಿಸುವುದು ಮತ್ತು ಪ್ರಚಾರದ ಕುರಿತು ಚರ್ಚಿಸಿದರು’ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT