ಶನಿವಾರ, ಸೆಪ್ಟೆಂಬರ್ 21, 2019
25 °C

ಫುಟ್‌ಪಾತ್‌ಗೆ ಗುದ್ದಿದ ಬೈಕ್‌: ಹಿಂಬದಿ ಸವಾರ ಸಾವು

Published:
Updated:

ಬೆಳಗಾವಿ: ಇಲ್ಲಿನ ಗೋಗಟೆ ವೃತ್ತದ ಬಳಿಯ ರೈಲ್ವೆ ಮೇಲ್ಸೇತುವೆ ಮೇಲಿನ ಫುಟ್‌ಪಾತ್‌ಗೆ ಶನಿವಾರ ರಾತ್ರಿ ಬೈಕ್‌ ಢಿಕ್ಕಿ ಹೊಡೆದುದರಿಂದ ಹಿಂಬದಿ ಸವಾರ ಮಲ್ಲಿಕಾರ್ಜುನ ಅಪ್ಪಣ್ಣ ದರೂರ (25) ಮೃತಪಟ್ಟಿದ್ದಾರೆ. ಬೈಕ್‌ ಸವಾರ ಅಕ್ಷಯ ಸುರೇಶ ಕುಂಬಾರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಅಥಣಿ ಮೂಲದ ಹಾಗೂ ಬೆಳಗಾವಿಯ ಗೋಂಧಳಿ ಗಲ್ಲಿಯ ನಿವಾಸಿ ಮಲ್ಲಿಕಾರ್ಜುನ ತಮ್ಮ ಸ್ನೇಹಿತ ಅಕ್ಷಯ ಜೊತೆ ಬೈಕ್‌ ಮೇಲೆ ಹೊರಟಿದ್ದಾಗ ಅಪಘಾತ ಸಂಭವಿಸಿತು. ಮಲ್ಲಿಕಾರ್ಜುನ ಅವರ ತಲೆಗೆ ತೀವ್ರ ಪೆಟ್ಟಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕುಳಿಯಲಿಲ್ಲ. 

ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post Comments (+)