ಬೆಳಗಾವಿ: ‘ಬಿಜೆಪಿ ಡೀಲಿಂಗ್ ಪಕ್ಷ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ತಿರುಗೇಟು ನೀಡಿದರು.

‘ಕಾಂಗ್ರೆಸ್ ದಲ್ಲಾಳಿಗಳ ಪಕ್ಷ’ ಎಂಬ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅವರೇನು ಶುದ್ಧ ಇದ್ದಾರಾ? ಅವರ ಪಕ್ಷದವರು ಏನು ಮಾಡುತ್ತಿದ್ದಾರೆ ಗೊತ್ತಿಲ್ಲವೇ. ಬೆಂಗಳೂರಿನಲ್ಲಿ ಗುತ್ತಿಗೆದಾರರು, ಅಧಿಕಾರಿಗಳನ್ನು ಕೇಳಿದರೆ ಅವರೇ ಎಲ್ಲವನ್ನೂ ಹೇಳುತ್ತಾರೆ. ಬಾಯಿಗೆ ಬಂದಂತೆ ಹೇಳುವುದು ಬಿಜೆಪಿಯವರಿಗೆ ಚಾಳಿಯಾಗಿದೆ’ ಎಂದು ವಾಗ್ದಾಳಿ ನಡೆಸಿದರು.

‘ಹೇಗೆ ಡೀಲಿಂಗ್ಸ್ ಆಗುತ್ತಿವೆ; ಎಲ್ಲಿ ದುಡ್ಡು ಕಲೆಕ್ಷನ್ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಮತ್ತು ಗುತ್ತಿಗೆದಾರರೇ ಹೇಳುತ್ತಾರೆ’ ಎಂದರು.

‘ಬಿಜೆಪಿಯವರು ರಾಜಕೀಯವಾಗಿ ಆಸ್ತಿ, ಹಣ ಮಾಡಿಲ್ಲವೇ? ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಬ್ಬರನ್ನೇ ಏಕೆ ಟಾರ್ಗೆಟ್ ಮಾಡುತ್ತಿದ್ದಾರೆ. ಎಲ್ಲರನ್ನೂ ಒಂದೇ ರೀತಿ ನೋಡಬೇಕು ಎನ್ನುವುದು ನಮ್ಮ ವಾದ’ ಎಂದು ಹೇಳಿದರು.

‘ರಾಜಕೀಯದಲ್ಲಿ ಯಾರೂ ಸತ್ಯ ಹರಿಶ್ಚಂದ್ರ ಅಲ್ಲ. ಆದರೆ, ಹೇಳಿಕೆ ನೀಡುವುದಕ್ಕೂ ಇತಿಮಿತಿ ಇರುತ್ತದೆ. ವಸ್ತುಸ್ಥಿತಿಯನ್ನು ಜೋಶಿ ಮುಚ್ಚಿಟ್ಟಿದ್ದಾರೆ. ಅವರ ಸರ್ಕಾರದಲ್ಲಿ ಏನಾಗುತ್ತಿದೆ ಎನ್ನುವುದನ್ನು ನೋಡಿಕೊಂಡು ಹೇಳಿಕೆ ನೀಡಬೇಕು’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.