ಅಥಣಿ (ಬೆಳಗಾವಿ ಜಿಲ್ಲೆ): ‘ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಬಿಜೆಪಿಯಿಂದ ಆದಷ್ಟು ಬೇಗನೆ ಸಿಹಿ ಸುದ್ದಿ ಬರಲಿದೆ. ಒಂದು ಸ್ಥಾನಮಾನ ಸಿಗುತ್ತದೆ’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯಿಂದ ಉಚ್ಚಾಟನೆಗೊಂಡ ಯತ್ನಾಳ್ ಅವರಿಗೆ ಮತ್ತೆ ಬಿಜೆಪಿ ಸಂತೋಷದ ಸುದ್ದಿ ನೀಡುತ್ತದೆ. ಹಿರಿಯ ಶಾಸಕ ಯತ್ನಾಳ್ ಅವರು ಮಾತಿನ ಮೇಲೆ ಹಿಡಿತ ಇರಿಸಿಕೊಳ್ಳಬೇಕು ಎಂದು ಮಾಧ್ಯಮಗಳ ಮುಖಾಂತರ ಮನವಿ ಮಾಡಿಕೊಳ್ಳುತ್ತೇನೆ’ ಎಂದರು.

‘ಬಿಜೆಪಿಯಿಂದ ಟಿ.ಸೋಮಶೇಖರ್ ಹಾಗೂ ಹೆಬ್ಬಾರ್ ಅವರ ಉಚ್ಚಾಟಿಸಿರುವ ಪಕ್ಷದ ತಿರ್ಮಾನವನ್ನು ನಾನು ಸ್ವಾಗತಿಸುತ್ತೇನೆ. ಪಕ್ಷಕ್ಕಿಂತ ನಾನು ದೊಡ್ಡವನಲ್ಲ, ವರಿಷ್ಠರು ನಮಗೆ ತುಂಬಾ ಕಿಮ್ಮತ್ತು ಕೊಟ್ಟಿದ್ದಾರೆ. ನಮ್ಮ ಜೊತೆ ಚೆನ್ನಾಗಿದ್ದಾರೆ. ಪಕ್ಷದಲ್ಲಿ ಕೆಲವರಿಗೆ ನೊಟೀಸ್ ನೀಡಲಾಗಿದೆ. ಅವರು ಸದ್ಯಕ್ಕೆ ಬಾಯಿ ಮುಚ್ಚಿಕೊಂಡಿದ್ದಾರೆ. ಪಕ್ಷದ ಚೌಕಟ್ಟು ಬಿಟ್ಟರೆ ಅವರನ್ನು ಕೂಡಾ ಉಚ್ಚಾಟನೆ ಮಾಡುತ್ತಾರೆ’ ಎಂದರು.

‘ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ವಿರುದ್ಧ ಎಲ್ಲಿ ಏನು ಹೆಳಬೇಕು ಅದನ್ನು ತಿಳಿಸಲಾಗಿದೆ. ನಾನು ಅವರ ಬಗ್ಗೆ ಬಹಿರಂಗವಾಗಿ ಏನು ಮಾತನಾಡುವುದಿಲ್ಲ. ಕೇಂದ್ರ ರಾಜ್ಯ ರೈಲ್ವೆ ಸಚಿವ ಸೋಮಣ್ಣ ಅವರು ನೂತನವಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡುವ ಬಗ್ಗೆ ನನಗೆ ಗೋತಿಲ್ಲ. ಬಿಜೆಪಿ ಹೈಕಮಾಂಡ್ಗೆ ಏನು ಹೇಳಬೇಕು ಅದನ್ನು ತಿಳಿಸಲಾಗಿದೆ’ ಎಂದರು.

ಮಾಜಿ ಶಾಸಕರಾದ ಮಹೇಶ ಕುಮಠಳ್ಳಿ, ಶ್ರೀಮಂತ ಪಾಟೀಲ, ಮುಖಂಡರಾದ ನಾನಾಸಾಬ ಅವತಾಡೆ, ಧರೇಪ್ಪಾ ಠಕ್ಕಣ್ಣವರ, ರವಿ ಪೂಜಾರಿ, ಸಂತೋಷ ಕಕಮರಿ, ಅಶೋಕ ಯಲ್ಲಡಗಿ, ನಿಂಗಪ್ಪಾ ಪೂಜಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.