ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ, ಚಿಕ್ಕೋಡಿ ಎರಡೂ ಬಿಜೆಪಿ ಗೆಲವು ನಿಶ್ಚಿತ: ಈರಣ್ಣ ಕಡಾಡಿ

Published 7 ಮೇ 2024, 14:08 IST
Last Updated 7 ಮೇ 2024, 14:08 IST
ಅಕ್ಷರ ಗಾತ್ರ

ಮೂಡಲಗಿ: ‘5 ವರ್ಷಗಳ ಕಾಲ ರಾಷ್ಟ್ರವನ್ನಾಳುವ ಸರ್ಕಾರವನ್ನು ಆಯ್ಕೆ ಮಾಡುವ ಅತ್ಯಂತ ಮಹತ್ವಪೂರ್ಣವಾದ ಜವಾಬ್ದಾರಿ ಮತದಾರರ ಮೇಲಿದ್ದು, ಮತ ಎಂಬುವುದು ಒಂದು ಬ್ರಹ್ಮಾಸ್ತ್ರವಿದಂತೆ. ಅದನ್ನು ಬಳಸುವ ಮೂಲಕ ಒಂದು ಒಳ್ಳೆಯ ಸರ್ಕಾರವನ್ನು ರಚನೆ ಮಾಡಲು ಕಾರಣರಾಗಬೇಕು’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಮತದಾರರಿಗೆ ವಿನಂತಿಸಿದರು.

ಲೋಕಸಭಾ ಕ್ಷೇತ್ರದ ಚುನಾವಣೆ ದಿನದಂದು ಕಲ್ಲೋಳಿ ಪಟ್ಟಣದ 101ನೇ ಮತ ಕೇಂದ್ರದಲ್ಲಿ ಕುಟುಂಬಸ್ಥರೊಂದಿಗೆ ಮತ ಚಲಾಯಿಸಿ ಮಾತನಾಡಿದರು. ಜಗತ್ತಿನ ಬೇರೆ ಬೇರೆ ದೇಶಗಳ ಸುಮಾರು 20 ರಾಜಕೀಯ ಪಕ್ಷಗಳು ಈ ಚುನಾವಣೆಯ ಅಧ್ಯಯನ ಮಾಡಲಿಕ್ಕೆ ಭಾರತಕ್ಕೆ ಬಂದಿದ್ದಾರೆ. ಇದು ಅತ್ಯಂತ ಗಮನಾರ್ಹ ಅಂಶವೆಂದು ಹೇಳಿದರು.

ಕಳೆದ ಒಂದು ತಿಂಗಳುಗಳ ಕಾಲ ನಮ್ಮೆಲ್ಲ ಕಾರ್ಯಕರ್ತರ ಪರಿಶ್ರಮದ ಫಲವಾಗಿ ಬೆಳಗಾವಿ ಮತ್ತು ಚಿಕ್ಕೋಡಿ ಈ ಎರಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ಹೆಚ್ಚು ಮತಗಳನ್ನು ಪಡೆಯುವ ಮೂಲಕ ನೀರಿಕ್ಷಿತ ಗೆಲುವನ್ನು ಸಾಧಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಅವರ ತಂದೆಯವರಾದ ಭೀಮಪ್ಪ ಕಡಾಡಿ, ಸಂಸದರ ಪತ್ನಿ ಸುಮಿತ್ರಾ ಕಡಾಡಿ, ಮಕ್ಕಳಾದ ಸತೀಶ ಕಡಾಡಿ, ಲಾವಣ್ಯ, ಪ್ರತಿಭಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT