ಯಮಕನಮರಡಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಯಮಕನಮರಡಿ ಗ್ರಾಮ ಪಂಚಾಯ್ತಿ ಸರ್ಕಲ್ ಬಳಿ ಗುರುವಾರ ಕರವೇ ಯಮಕನಮರಡಿ ಕ್ಷೇತ್ರದ ಯುವ ಘಟಕದ ಕಾರ್ಯಕರ್ತರು ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದರು.
ಉಪತಹಶೀಲ್ದಾರ್ ಸಿ.ಆರ್.ಶೀಗಿಹೊಳಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಹುಕ್ಕೇರಿ ತಾಲ್ಲೂಕು ಕರವೇ ಅಧ್ಯಕ್ಷ ಪ್ರಮೋದ ಹೊಸಮನಿ, ‘ರಾಜ್ಯದ ರೈತರಿಗೆ ಮಳೆ ಇಲ್ಲದೆ ಸಂಕಷ್ಟದಲ್ಲಿರುವಾಗ ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ಮಾಡಬೇಕು ಎಂಬ ನಿರ್ಧಾರವನ್ನು ಖಂಡಿಸುತ್ತೇವೆ’ ಎಂದರು.
ಉಪಾಧ್ಯಕ್ಷ ರಾಮಚಂದ್ರ ರೆಂಗಟೆ, ಯಮಕನಮರಡಿ ಕ್ಷೇತ್ರದ ಯುವ ಘಟಕ ಅಧ್ಯಕ್ಷ ವಿನಾಯಕ ಕೋಳಿ, ವಿಶ್ವನಾಥ ಪಾಟೀಲ, ಪ್ರಮೋದ ಕೂಗೆ, ಸದಾನಂದ ಗುಂಡಿ, ಪ್ರೇಮಕುಮಾರ ಪಾಟೀಲ, ಅಡಿವೆಪ್ಪಾ ಮೋಕಾಶಿ, ಮಾರುತಿ ಗುಡದಿ, ಗುರುಪಾದಯ್ಯಾ ಹಿರೇಮಠ, ಬೀಮಾ ಕಲ್ಕುಟಗಿ, ರಮೇಶ ಗೋಣಿ, ಅನೀಲ ಗೋಟರಿ, ನಾಗರಾಜ ಘಸ್ತಿ, ಗಣೇಶ ಕಲ್ಕುಟಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.