ಭಾನುವಾರ, ಮೇ 16, 2021
25 °C

ಸಿರಿಧಾನ್ಯಗಳಿಂದ ತಿನಿಸುಗಳ ತಯಾರಿ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಳಗಾವಿ: ಇಲ್ಲಿನ ಟಿಳಕವಾಡಿಯ ಭುವನೇಶ್ವರಿ ಉತ್ಸವ ಸಮಿತಿಯಿಂದ ಭಾನುವಾರ ಸಿರಿಧಾನ್ಯಗಳಿಂದ ತಿನಿಸುಗಳನ್ನು ಸಿದ್ಧಪಡಿಸುವ ಸ್ಪರ್ಧೆ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿದ್ದ ವಿದ್ಯಾ ಹುಂಡೇಕರ ಮಾತನಾಡಿ, ‘ಹಿಂದಿನ ಹಿರಿಯರ ಆರೋಗ್ಯದ ಗುಟ್ಟಿನ ಮೂಲವಾಗಿರುವ ಸಿರಿಧಾನ್ಯಗಳಲ್ಲಿ ತಯಾರಿಸಿದ ಖಾದ್ಯಗಳು ಬೆರಗು ಮೂಡಿಸುವಂತಿವೆ. ಹೂಗಳಿಲ್ಲದೇ ಕೇವಲ ಎಲೆಗಳಿಂದ ಸಿದ್ಧಪಡಿಸಿದ ಸುಂದರ ಹೂಕುಂಡಗಳು ಕಣ್ಮನ ಸೆಳೆಯುತ್ತಿವೆ. ಇಂತಹ ಕಾರ್ಯಕ್ರಮಗಳು ಅಗಾಗ ನಡೆದರೆ ಆರೋಗ್ಯ ಮಾಹಿತಿ ದೊರೆತಂತಾಗುತ್ತದೆ’ ಎಂದರು.

‘ಸಿರಿಧಾನ್ಯಗಳಿಂದ ಮಾಡಿದ ಆಹಾರ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು’ ಎಂದು ತಿಳಿಸಿದರು.

ಕವನಗಾಯನ ಸ್ಪರ್ಧೆಯೂ ನಡೆಯಿತು. ಸಮಿತಿಯ ಭಾರತಿ ಸಂಕಣ್ಣನವರ, ಜ್ಯೋತಿ ಬಾವಿಕಟ್ಟಿ, ವೀಣಾ ನಾಗಮೇತ್ರಿ, ಭಾರತಿ ಜೀರಗೆ, ಲಲಿತಾ ಪಾಟೀಲ, ಆಶಾ ಪಾಟೀಲ, ರತ್ನಪ್ರಭಾ ಬೆಲ್ಲದ, ಜ್ಯೋತಿ ಬದಾಮಿ, ಸುಜಾತಾ ಇದ್ದರು.

ಸರ್ವಮಂಗಳಾ ಅರಳಿಮಟ್ಟಿ ನಿರೂಪಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು