ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | 155 ಜನರಿಗೆ ಕೋವಿಡ್ ಸೋಂಕು

Last Updated 27 ಜುಲೈ 2020, 15:31 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಹೊಸದಾಗಿ 155 ಜನರಿಗೆ ಕೋವಿಡ್‌–19 ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕಿತರಾದವರ ಸಂಖ್ಯೆ 2,310ಕ್ಕೆ ತಲುಪಿದೆ. ಇತ್ತೀಚೆಗೆ ಮೃತರಾದ 6 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 52ಕ್ಕೆ ಏರಿದೆ.

ತೀವ್ರ ಉಸಿರಾಟದ ತೊಂದರೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಆರು ಜನರು ಇತ್ತೀಚೆಗೆ ನಿಧನರಾಗಿದ್ದರು. ಇವರ ಮಾದರಿಯನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಂಕಿರುವುದು ದೃಢಪಟ್ಟಿದೆ.

ಬೆಳಗಾವಿಯ 70 ವರ್ಷದ ಮಹಿಳೆ (ಪಿ–64812) ಅವರು ಇದೇ ತಿಂಗಳ 16ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇದೇ ರೀತಿ, 55 ವರ್ಷದ ಪುರುಷ (ಪಿ–72871) 19ರಂದು ದಾಖಲಾಗಿದ್ದರು. ಇವರಿಬ್ಬರೂ 22ರಂದು ಮರಣ ಹೊಂದಿದ್ದರು. ಚಿಕ್ಕೋಡಿಯ 73 ವರ್ಷದ ವೃದ್ಧ (ಪಿ–52180) 15ರಂದು ಆಸ್ಪತ್ರೆಗೆ ದಾಖಲಾಗಿ, 22ರಂದು ಮರಣ ಹೊಂದಿದ್ದರು. ಖಾನಾಪುರದ 70 ವರ್ಷದ ವೃದ್ಧ (ಪಿ– 60184) 18ರಂದು ದಾಖಲಾಗಿ, 22ರಂದು ಸಾವನ್ನಪ್ಪಿದ್ದರು.

ಗೋಕಾಕದ 75 ವ‌ರ್ಷದ ವೃದ್ಧೆ (ಪಿ– 76246) 21ರಂದೇ ಆಸ್ಪತ್ರೆಗೆ ದಾಖಲಾಗಿ, ಅವತ್ತೇ ಮರಣ ಹೊಂದಿದ್ದರು. ಸವದತ್ತಿಯ 63 ವರ್ಷದ ಮಹಿಳೆ (ಪಿ– 78454) 21ರಂದು ದಾಖಲಾಗಿ, 22ರಂದು ಮೃತರಾಗಿದ್ದರು.

38 ಗುಣಮುಖ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ 38 ಜನರು ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT