ಬೆಳಗಾವಿ: ‘ಗ್ರಾಮಗಳ ಅಭಿವೃದ್ಧಿ ವಿಚಾರದಲ್ಲಿ ನಾನು ಎಂದೂ ರಾಜಕೀಯ ಮಾಡಿಲ್ಲ. ಮತ ಹಾಕಿದವರು, ಮತ ಹಾಕದವರು ಎಲ್ಲರೂ ನಮ್ಮವರೇ ಎಂದು ಭಾವಿಸಿರುವೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದ್ದಾರೆ.

ತಾರಿಹಾಳ ಗ್ರಾಮದಲ್ಲಿ ನಿರ್ಮಿಸಿದ ರಾಮಲಿಂಗೇಶ್ವರ ದೇವಸ್ಥಾನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ‘ನಾನು ದೇವರ ಹೆಸರಿನಲ್ಲಿ ರಾಜಕಾರಣ ಮಾಡುವುದಿಲ್ಲ. ದೇವರ ಹೆಸರು ಹೇಳಿಕೊಂಡು ರಾಜಕಾರಣ ಮಾಡುವವರೇ ಬೇರೆ. ನಾವು ಅಭಿವೃದ್ಧಿ ಕೆಲಸ ಮಾಡುವವರು’ ಎಂದರು.

‘ದೇವಸ್ಥಾನ ಅಭಿವೃದ್ಧಿಪಡಿಸುವ ಬಗ್ಗೆ ಎರಡು ವರ್ಷಗಳ ಹಿಂದೆಯೇ ತಾರಿಹಾಳ ಗ್ರಾಮಸ್ಥರಿಗೆ ಮಾತುಕೊಟ್ಟಿದ್ದೆ. ಅದರಂತೆಯೇ ಇಂದು ಅದ್ದೂರಿಯಾಗಿ ರಾಮಲಿಂಗೇಶ್ವರ ದೇವಸ್ಥಾನವನ್ನು ಉದ್ಘಾಟಿಸಲಾಗಿದೆ. ದೇವಸ್ಥಾನಕ್ಕೆ ₹1 ಕೋಟಿ ಅನುದಾನ ಒದಗಿಸಿದ್ದೇನೆ. ಕ್ಷೇತ್ರದ ಜನರ ಬೆಂಬಲವೇ ನಾನು ಸಚಿವೆಯಾಗಲು ಕಾರಣ, ಗ್ರಾಮಸ್ಥರು ನನಗೆ ಆಶೀರ್ವಾದದ ಜೊತೆಗೆ ಮತ ನೀಡಿದರು’ ಎಂದು ಸಚಿವೆ ಸ್ಮರಿಸಿದರು.

‘ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಐದು ದಿನಗಳ ಕಾಲ ಅನ್ನಸಂತರ್ಪಣೆ ಮಾಡಲಾಯಿತು. ಬಡಾಲ ಅಂಕಲಗಿ ಗ್ರಾಮದಲ್ಲಿ ₹2 ಕೋಟಿ ವೆಚ್ಚದಲ್ಲಿ ಲಕ್ಷ್ಮೀ ದೇವಿ ದೇವಸ್ಥಾನ ಹಾಗೂ ತುರಮುರಿ ಗ್ರಾಮದಲ್ಲಿ ಜ್ಯೋತಿರ್ಲಿಂಗ ಮಂದಿರ ಉದ್ಘಾಟಿಸಲಾಗಿದೆ’ ಎಂದು ತಿಳಿಸಿದರು.

ಬಡೇಕೊಳ್ಳಿ ಮಠದ ಶಿವಯೋಗಿ ನಾಗೇಂದ್ರ ಸ್ವಾಮಿಗಳು, ನಾಗಯ್ಯ ಪೂಜಾರ, ಪ್ರಮೊದ್ ಜಾಧವ, ಯಲ್ಲಪ್ಪ ಖನಗಾಂವ್ಕರ, ಸ್ವಪ್ನಿಲ್ ಜಾಧವ, ಸಿದ್ದಣ್ಣ ಖನಗಾಂವ್ಕರ, ದೇವಸ್ಥಾನ ಸಮಿತಿಯ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.