ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾಮಗಾರಿಗಳೇ ಗೆಲುವಿಗೆ ಸಹಕಾರಿ: ಶಶಿಕಲಾ ಜೊಲ್ಲೆ

Published 7 ಮೇ 2023, 16:04 IST
Last Updated 7 ಮೇ 2023, 16:04 IST
ಅಕ್ಷರ ಗಾತ್ರ

ನಿಪ್ಪಾಣಿ: ಬೋರಗಾವ ಪಟ್ಟಣದಲ್ಲಿ ಸುಮಾರು ₹101 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದೇನೆ. ಪಟ್ಟಣದಲ್ಲಿ ನಡೆದ ಎಲ್ಲ ಶಾಶ್ವತ ಕಾಮಗಾರಿಗಳು ನನ್ನ ಆಡಳಿತಾವಧಿಯಲ್ಲಿಯೇ ಆಗಿವೆ. ಈ ಚುನಾವಣೆಯಲ್ಲಿ ಜನ ಆಶೀರ್ವದಿಸಲಿದ್ದಾರೆ ಎಂದು ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ತಾಲ್ಲೂಕಿನ ಬೋರಗಾವ ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರಚಾರ ರ‍್ಯಾಲಿಯಲ್ಲಿ ಮಾತನಾಡಿದರು.

ಜೈನ ಧರ್ಮದವರ ಪವಿತ್ರ ತೀರ್ಥಸ್ಥಳವಾದ ಸಮ್ಮೇದ ಶಿಖರ್ಜಿ ಬಳಿ ಯಾತ್ರಿ ನಿವಾಸದ ಕಾರ್ಯ ಪ್ರಗತಿಯಲ್ಲಿದೆ. ಅನೇಕ ದೇಗುಲ-ಮಶೀದಿಗಳ ಜೀಣೋದ್ಧಾರಕ್ಕೆ ಕೋಟ್ಯಂತರ ರೂಪಾಯಿ ಅನುದಾನ ವಿತರಿಸಲಾಗಿದೆ. ನುಡಿದಂತೆ ನಡೆದಿದ್ದೇನೆ. ದಾಖಲೆಯ ಮತಗಳಿಂದ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಪಟ್ಟಣ ಪಂಚಾಯಿತಿ ಸದಸ್ಯ ಶರದ ಜಂಗಟೆ ಮಾತನಾಡಿದರು. ಸುನೀಲ ಪಾಟೀಲ, ರಮೇಶ ಪಾಟೀಲ, ಬಾಬಾಸಾಹೇಬ ಚೌಗುಲೆ, ಶಿವಾಜಿ ಭೋರೆ, ಫಿರೋಜ್ ಅಪರಾಜ, ಮಹಾವೀರ ಪಾಟೀಲ, ಅಜಿತ ಕಡೊಲೆ, ರಾಣಿ ಬೇವಿನಕಟ್ಟಿ, ಬಿಸ್ಮಿಲ್ಲಾ ಅಪರಾಜ, ಮೀನಾಕ್ಷಿ ಭಾದುಲೆ, ಅರ್ಚನಾ ಭಾದುಲೆ, ದೀಪಾಲಿ ಕುಂಭಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT