ಮಂಗಳವಾರ, ಮಾರ್ಚ್ 9, 2021
28 °C

‘ಬಸ್ತವಾಡದಲ್ಲಿ ₹ 5 ಕೋಟಿ ವೆಚ್ಚದಲ್ಲಿ ಕಾಮಗಾರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ತಾಲ್ಲೂಕಿನ ಬಸ್ತವಾಡ ಗ್ರಾಮದಿಂದ ಕೊಂಡಸಕೊಪ್ಪವರೆಗೆ ನೂತನವಾಗಿ ನಿರ್ಮಿಸಿರುವ ಡಾಂಬರ್ ರಸ್ತೆಯನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಭಾನುವಾರ ಉದ್ಘಾಟಿಸಿದರು.

ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿದ ಅವರು, ‘ಬಸ್ತವಾಡ ಗ್ರಾಮದಲ್ಲಿ ಈವರೆಗೆ ₹ 5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳು ಪೂರ್ಣಗೊಂಡಿವೆ. ಗ್ರಾಮಸ್ಥರ ಪ್ರೀತಿ, ಪ್ರೋತ್ಸಾಹ ಹಾಗೂ‌ ವಾತ್ಸಲ್ಯಭರಿತ ಸನ್ಮಾನಕ್ಕೆ ಪಾತ್ರವಾಗಿರುವುದು ನನಗೆ ಖುಷಿ ನೀಡಿದೆ. ನಾನು ಇಷ್ಟೊಂದು ವೇಗವಾಗಿ ಅಭಿವೃದ್ಧಿ ಕೆಲಸದಲ್ಲಿ ತೊಡಗಿರುವುದಕ್ಕೆ ಜನರ ಸಹಕಾರ, ಪ್ರೋತ್ಸಾಹವೇ ಕಾರಣ’ ಎಂದರು.

ಮುಖಂಡರಾದ ಅಪ್ಪಯ್ಯ ಬಾಗಣ್ಣವರ, ಮಹಾವೀರ ‌ಸಂಕೇಶ್ವರಿ, ಭರತೇಶ ಸಂಕೇಶ್ವರಿ, ಮಾಣಿಕ, ಮನೋಹರ ಮುಚ್ಚಂಡಿ, ಅಜಿತ ಬಾಗಣ್ಣವರ, ಅರ್ಜುನ ಪಾಟೀಲ, ಮನೋಹರ ಬಾಂಡಗಿ, ಗುಂಡು ಚೌಗುಲೆ, ರಾಜು ಬಡವಣ್ಣವರ, ರಾಮ ಕಾಕತ್ಕರ, ರಾಮ ಚೌಗುಲೆ, ಪಾರೀಸ ಪಾಟೀಲ, ಶ್ರೀನಿಕ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.