ಗುರುವಾರ , ಆಗಸ್ಟ್ 5, 2021
28 °C
ಜಗಳ ಬಿಡಿಸಲು ಹೋದವನ ಮೇಲೆ ಹಲ್ಲೆ

ಡಾಬಾ ಮಾಲೀಕ ಕೊಲೆ: ಐವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿ ಬಳಿ ಪಂಚವಟಿ ಡಾಬಾ ಮಾಲೀಕ ಬೈಲಹೊಂಗಲದ ಪ್ರಕಾಶ ಬಸವರಾಜ ನಾಗನೂರ (35) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನ ಆರೋಪಿಗಳಲ್ಲಿ ಐವರನ್ನು ಸೋಮವಾರ ಕಿತ್ತೂರು ಪೊಲೀಸರು ಬಂಧಿಸಿದ್ದಾರೆ.

ಎಂ.ಕೆ. ಹುಬ್ಬಳ್ಳಿಯ ಅಬ್ದುಲ್‌ ಅಜೀಜ್ ಮಹಮ್ಮದ್‌ ಅಲಿ ಬಡೇಗಾರ, ಮಹ್ಮದ್‌ ಶಫಿ, ಶಬೀಲ ಅಹ್ಮದ್‌, ಇರ್ಫಾನ್ ಮೋದಿನ್‌ ಶಹಾ ಬಡೇಗಾರ ಹಾಗೂ ಸಾಜೀದ್ ಶಬ್ಬೀರ್‌ ಅಹ್ಮದ್‌ ಬಡೇಗಾರ ಬಂಧಿತರು.

ಬಿಲಾಲ ಅಬ್ದುಲ್‌ ಹಕ್ ಬಡೇಗಾರ, ಸರ್ಫಾಜ್ ಮಹ್ಮದ್‌ ಶಾ ಬಡೇಗಾರ ಹಾಗೂ ಶಹಾಬಾಜ್ ಮಹ್ಮದ್‌ ಶಾ ಬಡೇಗಾರ ಪರಾರಿಯಾಗಿದ್ದಾರೆ.

ಜಗಳ ಬಗೆಹರಿಸಲು ಮಧ್ಯ ಪ್ರವೇಶಿಸಿದ್ದ ಡಾಬಾ ಮಾಲೀಕನನ್ನು ಭಾನುವಾರ ಜಗ್ಗು, ಕಿತ್ಲಿ ಹಾಗೂ ಬಡಿಗೆಯಿಂದ ಹೊಡೆದು ತೀವ್ರ ಗಾಯಗೊಳಿಸಲಾಗಿತ್ತು ಎಂದು ಪೊಲೀಸರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.