ಗುರುವಾರ , ಜುಲೈ 7, 2022
23 °C

ಹೋಟೆಲ್‌ ರೂಂನಲ್ಲಿ ವಜ್ರದ ಬಳೆಗಳು ಕಳವು: ಬೆಳಗಾವಿಲಿ ಹರಿಯಾಣ ಮಹಿಳೆಗೆ ಸಂಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ತಾಲ್ಲೂಕಿನ ಕಾಕತಿ ಬಳಿಯ ಹೋಟೆಲ್‌ವೊಂದರಲ್ಲಿ ಬಾಡಿಗೆ ಪಡೆದಿದ್ದ ಕೊಠಡಿಯಲ್ಲಿಟ್ಟಿದ್ದ ₹ 9 ಲಕ್ಷದಿಂದ ₹10 ಲಕ್ಷ ಮೌಲ್ಯದ ವಜ್ರದ ಬಳೆಗಳು ಕಳವಾಗಿರುವ ಬಗ್ಗೆ ಕಾಕತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಹರಿಯಾಣ ಮೂಲದ ಕಂಪನಿಯೊಂದರ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆಯೊಬ್ಬರು ಹೊಟೇಲ್‌ನಲ್ಲಿ ತಂಗಿದ್ದರು. ಮಾರ್ಚ್‌ 15ರಂದು ಬೆಳಿಗ್ಗೆ 10ಕ್ಕೆ ಹೋಟೆಲ್‌ಗೆ ಬಂದು ಬ್ಯಾಗ್ ಇಟ್ಟು ನಂತರ ಕಾರ್ಯ ನಿಮಿತ್ತ ಹೊರಗಡೆಗೆ ತೆರಳಿದ್ದರು. ರಾತ್ರಿ 10.30ರ ಸುಮಾರಿಗೆ ಕೊಠಡಿಗೆ ಬಂದು ನೋಡಿದಾಗ ವಜ್ರದ ಬಳೆಗಳು ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಬ್ಯಾಗ್‌ ಅನ್ನು ತೆರೆಯಲಾಗಿತ್ತು. ಟವೆಲ್‌ ಒದ್ದೆ ಆಗಿತ್ತು. ಬಾತ್‌ರೂಂನಲ್ಲಿನ ಶವರ್ ಬಳಸಲಾಗಿತ್ತು. ತಮ್ಮ ಕೊಠಡಿಗೆ ಯಾರೋ ಬಂದು ಹೋಗಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಒಬ್ಬ ಪುರುಷ ಮತ್ತು ಮಹಿಳೆ ಕೊಠಡಿ ಪ್ರವೇಶಿಸಿರುವುದು ಕಂಡುಬಂದಿದೆ. ಗ್ರಾಹಕರೊಬ್ಬರಿಗೆ ನೀಡಿದ ಕೊಠಡಿಯನ್ನು ಬೇರೆ ಗ್ರಾಹಕರಿಗೆ ಕೊಟ್ಟಿದ್ದಾರೆ’ ಎಂದು ದೂರಿನಲ್ಲಿ ಮಾಹಿತಿ ನೀಡಿದ್ದಾರೆ. ಟ್ವೀಟ್‌ ಮಾಡಿಯೂ ಹೋಟೆಲ್ ವಿರುದ್ಧ ಛೀಮಾರಿ ಹಾಕಿದ್ದಾರೆ.

‘ನನ್ನ ಕೊಠಡಿಯೊಳಗೆ ಪ್ರವೇಶಿಸಿ ಬ್ಯಾಗ್‌ನಲ್ಲಿದ್ದ ವಜ್ರದ ಬಳೆಗಳನ್ನು ಕಳವು ಮಾಡಲಾಗಿದೆ  ಎಂದು ಗ್ರಾಹಕಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ಕಾಕತಿ ಠಾಣೆ ಇನ್‌ಸ್ಪೆಕ್ಟರ್‌ ತನಿಖೆ ಮುಂದುವರಿಸಿದ್ದಾರೆ’ ಎಂದು ಅಪರಾಧ ವಿಭಾಗದ ಡಿಸಿಪಿ ಪಿ.ವಿ. ಸ್ನೇಹಾ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು