ಶುಕ್ರವಾರ, ಜನವರಿ 24, 2020
28 °C

ಬೆಳಗಾವಿ: ನಾಯಿ ಕಚ್ಚಿ ಮಕ್ಕಳಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಗಾಂಧಿ ನಗರ, ಆಜಾದ್‌ ನಗರ, ಮನ್ನತ್‌ ಕಾಲೊನಿಯಲ್ಲಿ ಬೀದಿ ನಾಯಿಗಳು ಕಚ್ಚಿ ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶಹನವಾಜ್‌ ಇಶಾನದಾರ (3), ಫೈಜಾನ್ (5), ಅದೀಬಾ ಸೈಯದ್‌ (11) ಗಾಯಗೊಂಡವರು. ಗಾಯಗೊಂಡ ಮಕ್ಕಳನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಬ್ಬ ಬಾಲಕನಿಗೆ ನಾಯಿ ಕಚ್ಚಿದೆ ಎನ್ನಲಾಗಿದ್ದು, ಖಚಿತ ಮಾಹಿತಿ ತಿಳಿದುಬಂದಿಲ್ಲ.

ಮಂಗಳವಾರ ರಾತ್ರಿ ಮನೆಯಂಗಳದಲ್ಲಿದ್ದ ಮಕ್ಕಳ ಮೇಲೆ ನಾಯಿಗಳು ಪ್ರತ್ಯೇಕವಾಗಿ ದಾಳಿ ನಡೆಸಿವೆ. 10ಕ್ಕೂ ಹೆಚ್ಚು ನಾಯಿಗಳ ಗುಂಪು ದಾಳಿ ನಡೆಸಿವೆ. ಸ್ಥಳೀಯರು ಅವುಗಳನ್ನು ಓಡಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ನಗರದ ಹಲವು ಕಡೆಗಳಲ್ಲಿ ಬೀದಿ ನಾಯಿಗಳ ಹಾವಳಿ ಕಂಡುಬಂದಿದೆ. ಆದರೆ, ಇದನ್ನು ತಡೆಯಲು ಕ್ರಮ ಕೈಗೊಳ್ಳದಿರುವ ನಗರಪಾಲಿಕೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು