ಸಂಕೇಶ್ವರ: ತಂತ್ರಜ್ಞಾನದ ಜಗತ್ತಿನಲ್ಲಿ ಎಂಜಿನಿಯರ್‌ಗಳ ಪಾತ್ರ ಮಹತ್ವದ್ದಾಗಿದ್ದು, ದೇಶದ ಅಭಿವೃದ್ಧಿ ಕೆಲಸಗಳಿಗೆ ಎಂಜನಿಯರ್‌ಗಳ ಅವಶ್ಯಕತೆ ಇದೆ. ಎಂಜನಿಯರ್‌ಗಳು ಪ್ರಾಮಾಣಿಕತೆ, ವಿಶ್ವಾಸರ್ಹತೆಯಿಂದ ಕಾರ್ಯನಿರ್ವಹಿಸಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ತಾಲ್ಲೂಕು ಪಂಚಾಯಿತಿ ನಿವೃತ್ತ ಇಒ ಎ.ಬಿ.ಪಟ್ಟಣಶೆಟ್ಟಿ ಹೇಳಿದರು.
ಪಟ್ಟಣದ ಕಣಗಲಿ ಬಡಾವಣೆಯಲ್ಲಿ ಹೈಟೆಕ್ ಡೆವಲಪರ್ಸ್ ಹಾಗೂ ಪವನ್ ಬಿಲ್ಡರ್ಸ್ ಮತ್ತು ಡೆವೆಲ್ಪರ್ಸ್ ವತಿಯಿಂದ ಹಮ್ಮಿಕೊಂಡಿದ್ದ ಎಂಜಿನಿಯರ್‌ಗಳ ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪುರಸಭೆ ಮುಖ್ಯ ಎಂಜಿನಿಯರ್ ರವೀಂದ್ರ ಗಡಾದ ಮಾತನಾಡಿ, ಎಂಜಿನಿಯರ್‌ಗಳು ಗುಣಮಟ್ಟದಲ್ಲಿಎಂದೂ ಹೊಂದಾಣಿಕೆ ಮಾಡಿಕೊಳ್ಳದೆ ಪ್ರಾಮಾಣಿಕತೆ ಹಾಗೂ ವಿಶ್ವಾಸರ್ಹತೆಯಿಂದ ಕಾರ್ಯನಿರ್ವಹಿಸಬೇಕು. ಅಭಿವೃದ್ಧಿ ಕಾಮಗಾರಿಗಳಲ್ಲಿ ಪಾರದರ್ಶಕತೆ ಇರಬೇಕು ಹಾಗೂ ಗ್ರಾಹಕ ಸ್ನೇಹಿಯಾಗಿ ಕೆಲಸ ನಿರ್ವಹಿಸುವಂತೆ ಸಲಹೆ ನೀಡಿದರು.
ವಿಶ್ವಚೇತನ ವಿದ್ಯಾ ಸಂಸ್ಥೆ ಅಧ್ಯಕ್ಷ ಮಹೇಶ ದೇಸಾಯಿ ಮಾತನಾಡಿ, ಸರ್ ಎಂ.ವಿಶ್ವೇಶ್ವರಯ್ಯನವರು ಎಂಜಿನಿಯರ್ ಆಗಿ ತಮ್ಮ ಪಾಂಡಿತ್ಯ ಪ್ರದರ್ಶಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಹೊಂದಿದರು. ಇಂದಿನ ಎಂಜಿನಿಯರ್‌ಗಳು ಶಿಸ್ತು, ಯೋಜನಾ ಬದ್ಧ ನಿರ್ಣಯ, ಅಭಿವೃದ್ಧಿ ಪರ ದೂರದೃಷ್ಟಿ, ಪ್ರಾಮಾಣಿಕತೆಯಿಂದ ಅವರ ಆದರ್ಶ ಪಾಲಿಸುವಂತೆ ಕರೆ ನೀಡಿದರು.
ಉದ್ಯಮಿ ಪವನ ಕಣಗಲಿ ಮಾತನಾಡಿ, ವಿವಿಧ ಯೋಜನೆಗಳಲ್ಲಿ ಎಂಜಿನಿಯರ್‌ಗಳು ತೋರಿದ ಶ್ರದ್ಧೆ ಮತ್ತುಉತ್ಸಾಹದಿಂದ ಮಾದರಿ ಎನ್ನುವಂತಹ ಅಭಿವೃದ್ಧಿ ಕಾಮಗಾರಿಗಳಾಗಿದ್ದು ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಲು ಎಂಜಿನಿಯರ್‌ಗಳು ಹೊಸ ಚಿಂತನೆ, ಆಲೋಚನೆಗಳು ನಮಗೆ ಮುಂದೆ ಸಹಕಾರಿಯಾಗಲಿವೆ ಎಂದರು.
ಕಾರ್ಯಕ್ರಮದಲ್ಲಿ ಎಂಜಿನಿಯರ್‌ಗಳನ್ನು ಗೌರವಿಸಲಾಯಿತು. ಪ್ರಹ್ಲಾದ ಕುರಬೇಟ, ಸಾಧಿಕ್ ಮೋಮಿನ್, ಸಲಿಮ್ ಅತ್ತಾರ, ನಾವೇದ ಅತ್ತಾರ, ಅಶಿ ಸಯ್ಯದ, ಸಮೀರ ಸಯ್ಯದ, ಭೂಷಣ ಕುಲಕರ್ಣಿ, ಅಲಿ ಸಯ್ಯದ, ಪ್ರತಿಕ್‌ಭಾಗವತ್, ಬಾಬು ಜಾಧವ, ಬಸವರಾಜ ಕಡಾಡಿ, ಅಕ್ಷಯ ಪಾಟೀಲ ಸೇರಿದಂತೆ ಇತರರು ಇದ್ದರು. ಎಸ್. ಆರ್. ಮಾಳಿ ಸ್ವಾಗತಿಸಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.