ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ತಿಗೇರಿ: ನೇತ್ರ ತಪಾಸಣಾ ಶಿಬಿರ ನಾಳೆ

Published 17 ಡಿಸೆಂಬರ್ 2023, 16:06 IST
Last Updated 17 ಡಿಸೆಂಬರ್ 2023, 16:06 IST
ಅಕ್ಷರ ಗಾತ್ರ

ಸತ್ತಿಗೇರಿ: ಸ್ಥಳೀಯ ಮಳಿಮಲ್ಲೇಶ್ವರ ಮಠದ ಆವರಣದಲ್ಲಿ ಡಿ.18ರಂದು ಬೆಳಿಗ್ಗೆ 10ಕ್ಕೆ ಮಳಿಮಲ್ಲೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರಿ ಸಂಘ, ಎಸ್.ಜಿ.ಎಂ. ನೇತ್ರ ಭಂಡಾರ ಟ್ರಸ್ಟ್, ಹುಬ್ಬಳ್ಳಿಯ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಮತ್ತು ಸವದತ್ತಿಯ ದೃಷ್ಟಿ ಕೇಂದ್ರ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.

ಮಳಿಮಲ್ಲೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ, ಮಹಾಂತೇಶ ಗೋಡಿ ಅಧ್ಯಕ್ಷತೆ ವಹಿಸುವರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಬಂಗಾರೆವ್ವ ಮಾದರ ಕಾರ್ಯಕ್ರಮ ಉದ್ಘಾಟಿಸುವರು. ಉಪಾಧ್ಯಕ್ಷ ಗುರು ವಾಲಿ, ಗೌಡಪ್ಪ ಸವದತ್ತಿ, ನೇತ್ರ ತಜ್ಞ ಡಾ. ಪೂಜಾ ಬಡಿಗೇರ, ಶಿವಾನಂದ ಬಳಿಗಾರ, ಪಿಡಿಒ ಎ.ಬಿ. ಬಂಗಾರಿ, ಈರಣ್ಣ ಹೊಸಮನಿ, ಬಸವರಾಜ ಕೊಟ್ರಶೆಟ್ಟಿ, ಗುರಪ್ಪ ಶೆಟ್ಟರ್, ಭಾರತಿ ಹಿರೇಮಠ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT