ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶ ಸೇವೆಗೆ ಅವಕಾಶ ಸಿಗುವುದೇ ಪುಣ್ಯ’

Last Updated 3 ಜುಲೈ 2022, 14:22 IST
ಅಕ್ಷರ ಗಾತ್ರ

ಬೆಳಗಾವಿ: ‘28 ವರ್ಷ ಭಾರತೀಯ ಸೇನೆಯಲ್ಲಿ ಸೈನಿಕ, ಸುಬೇದಾರ ಆಗಿ ಸೇವೆ ಸಲ್ಲಿಸಿದ್ದು ನನ್ನ ಭಾಗ್ಯ. ಈ ದೇಶದ ಹಾಗೂ ತಾಯ್ನಾಡಿನ ಋಣ ತೀರಿಸಲು ಇಂಥ ನೂರಾರು ಜನ್ಮಗಳು ಬೇಕಾಗುತ್ತವೆ’ ಎಂದು ಪಂತ ಬಾಳೇಕುಂದ್ರಿಯ ಪ್ರದೀಪ ಮಿರಜಕರ ಹೇಳಿದರು.

ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಮರಳಿದ ಅವರನ್ನು ತವರೂರಾದ ಪಂತ ಬಾಳೇಕುಂದ್ರಿಯ ಶಿವಬಸವ ನಗರದ ಬಿ.ಕೆ. ಗೆಳೆಯರ ಬಳಗದಿಂದ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಈ ವೇಳೆ ಊರಿನ ಜನ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಅವರು, ತಮ್ಮ ಸುದೀರ್ಘ ದೇಶಸೇವೆಯ ದಿನಗಳನ್ನು ನೆನೆದರು.

ಅವರ ತಂದೆ ಮಹಾದೇವ ಮಿರಜಕರ, ಪತ್ನಿ ಮೀನಾಕ್ಷಿ, ಸಂಘದ ಅಧ್ಯಕ್ಷ ಶ್ರೀಕಾಂತ ಪುಡಲಕಟ್ಟಿ, ಸದಸ್ಯರಾದ ಜಗದೀಶ ಬಾಗೇವಾಡಿ, ಬಸವರಾಜ ಮೆಣಸಿನಕಾಯಿ, ಪಂಡಿತಪ್ಪ ಕಮತಗಿ, ಚಂದ್ರಯ್ಯ ವಿರಕ್ತಮಠ, ಶಿವಪ್ಪ ನಾಯಕರ, ಮಾರುತಿ ಅಂಬಲಿ, ಸತೀಶ ಯಳಲಿ, ಅರ್ಜುನ ಮಾಳನ್ನವರ, ನಿಜಗುಣಿ ತುಮ್ಮರಗುದ್ದಿ, ದೊಡ್ಡಗೌಡ್ರ ಪರ್ವತಗೌಡರ, ದ್ಯಾಮನ್ನ ಇಂಚಲ, ಮಾಹಾಂತೇಶ ಕೋಟಗಿ ಇದ್ದರು. ಚಂಪೂ ನಿರೂಪಿಸಿದರು. ಅರ್ಜುನ ಮಾಳನ್ನವರ ಸ್ವಾಗತಿಸಿದರು. ಸದಾನಂದ ತಾರಿಹಾಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT