ಭಾನುವಾರ, ಏಪ್ರಿಲ್ 18, 2021
24 °C

ಗುರುಗಳನ್ನು ಆಹ್ವಾನಿಸಿ ಸತ್ಕರಿಸಿದ ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚುಳಕಿ (ಸವದತ್ತಿ ತಾಲ್ಲೂಕು): ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1989-90 ಮತ್ತು 1990-91ರಲ್ಲಿ 7ನೇ ತರಗತಿ ಕಲಿತಿದ್ದ ಹಳೆಯ ವಿದ್ಯಾರ್ಥಿಗಳು 21 ವರ್ಷಗಳ ಬಳಿಕ ಶಿಕ್ಷಕರನ್ನು ಆಹ್ವಾನಿಸಿ ಗುರುವಂದನೆ ಸಲ್ಲಿಸಿದ್ದಾರೆ.

ಚುಳಕಿಯ ಗವಿಮಠದ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ಮತ್ತು ಉಗರಗೋಳದ ನಿರ್ವಾಣೇಶ್ವರ ಮಠದ ಮಹಾಂತ ಸ್ವಾಮೀಜಿ ನೇತೃತ್ವದಲ್ಲಿ ಶಾಲೆಯಲ್ಲಿ ಈಚೆಗೆ ನಡೆದ ಕಾರ್ಯಕ್ರಮವನ್ನು ಗ್ರಾಮದ ನಿವೃತ್ತ ಶಿಕ್ಷಕ ಗುರಪ್ಪ ಮಾಗುಂಡ ಉದ್ಘಾಟಿಸಿದರು. ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಕಾರಣರಾದ ನಿವೃತ್ತ ಮುಖ್ಯ ಶಿಕ್ಷಕ ಸದಾಶಿವ ಸೊಪ್ಪಡ್ಲ, ಕೆ.ಜಿ. ಭಜಂತ್ರಿ, ಜಿ.ಎಸ್. ಗರಗದ, ಪ್ರಭಾವತಿ ಕುಲಕರ್ಣಿ, ಸದ್ಯ ಬೆಳಗಾವಿ ತಾಲ್ಲೂಕು ಹಂಗರಗಾ ಮರಾಠಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿರುವ ಬಸಮ್ಮ ಭಜಂತ್ರಿ, ಆಚಮಟ್ಟಿ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿರುವ ಕಲ್ಲಯ್ಯ ಪೂಜೇರ ಅವರನ್ನು ಸತ್ಕರಿಸಿದರು.

ಜಿ.ಎಸ್. ಗರಗದ ಮಾತನಾಡಿ, ‘ಎರಡು ದಶಕಗಳ ನಂತರ ತಮ್ಮನ್ನು ಶಾಲೆಗೆ ಆಹ್ವಾನಿಸಿ ಸತ್ಕರಿಸಿದ ಹಳೆಯ ವಿದ್ಯಾರ್ಥಿಗಳ ಈ ಕಾರ್ಯ ಖುಷಿ ತಂದಿದೆ’ ಎಂದರು.

‘ತಮ್ಮ ಬಳಿ ವಿದ್ಯೆ ಕಲಿತ ವಿದ್ಯಾರ್ಥಿಗಳು ಈಗ ಸಮಾಜದ ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವುದನ್ನು ಗಮನಿಸಿದರೆ ಶಿಕ್ಷಕ ಜೀವನ ಸಾರ್ಥಕ ಎನಿಸಿದೆ’ ಎಂದು ಶಿಕ್ಷಕಿ ಬಸಮ್ಮ ಭಜಂತ್ರಿ ಹೇಳಿದರು.

ಗ್ರಾಮದ ಹಿರಿಯರಾದ ಗುರುಶಾಂತಯ್ಯ ಹಿರೇಮಠ, ಚಂದ್ರಶೇಖರಯ್ಯ ಚುಳಕಿಮಠ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು