ಗೋಕಾಕ: ‘ಜಲ ಸಂಪನ್ಮೂಲಗಳ ಸುರಕ್ಷತೆ, ರಕ್ಷಣೆ, ಸ್ವಚ್ಛತೆ ಮತ್ತು ನಿರ್ವಹಣಾ ಕ್ರಮಗಳನ್ನು ಅನುಸರಿಸುವ ಕುರಿತು ಹಿರೇನಂದಿ ಗ್ರಾಮ ಪಂಚಾಯಿತಿ ಜಲ ಸರಬರಾಜು ವಿಭಾಗದ ಮುಖ್ಯಸ್ಥ ಗಂಗಯ್ಯ ಹಿರೇಮಠ ವಿವರಿಸಿದರು.

ತಾಲ್ಲೂಕಿನ ಹಿರೇನಂದಿ ಗ್ರಾಮದಲ್ಲಿ ಅರಭಾವಿಯ ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕಾ ಮಹಾವಿದ್ಯಾಲಯ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಅಡಿ ಹಮ್ಮಿಕೊಳ್ಳಲಾಗಿದ್ದ ಎನ್.ಎಸ್.ಎಸ್. ಶಿಬಿರದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎನ್.ಎಸ್.ಎಸ್. ವಿಭಾಗದ ಅಧಿಕಾರಿ ಪ್ರವೀಣಕುಮಾರ, ಪ್ರತಿಕ್ಷಾ ಹಾಗೂ ರಾಘವೇಂದ್ರ ಕೆ.ಎಸ್. ಮಾತನಾಡಿದರು.

‘ಜಲ ಸಂಪನ್ಮೂಲ ಸಂರಕ್ಷಣೆ’ ವಿಷಯದ ಕುರಿತು ಪ್ರಿಯಾಂಕಾ ಎಂ.ಕೆ. ಉಪನ್ಯಾಸ ನೀಡಿದರು. ಸ್ವಯಂ ಸೇವಕಿ ಸವಿತಾ ಕಾರ್ಯಕ್ರಮ ನಿರ್ವಹಿಸಿದರು. ಮಣಿಕಂಠ ವಂದಿಸಿದರು.

ಅಗ್ನಿಶಾಮಕ ದಳದಿಂದ ಗ್ರಾಮದ ಕನಕದಾಸ ವೃತ್ತದಲ್ಲಿ ಅಗ್ನಿ ಅವಘಡಗಳನ್ನು ನಿರ್ವಹಿಸುವ ಕುರಿತು ಪ್ರಾತ್ಯಕ್ಷಿಕೆ ನಡೆಯಿತು. ಗೃಹಿಣಿಯರು ಮನೆಯಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್ ಬಳಕೆ ಕುರಿತು ಮಾಹಿತಿ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.