ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಿಂದ ಗುಜರಾತ್‌ನ ಭುಜ್‌ ನಡುವೆ ವಿಮಾನ ಹಾರಾಟ

Last Updated 2 ಮೇ 2022, 11:43 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿಯಿಂದ ಗುಜರಾತ್‌ನ ಭುಜ್‌ ನಡುವೆ ಜೂನ್‌ 3ರಿಂದ ವಿಮಾನ ಹಾರಾಟ ಕಾರ್ಯಾಚರಣೆ ನಡೆಸುವುದಾಗಿ ಸ್ಟಾರ್‌ ಏರ್‌ ಕಂಪನಿಯು ತಿಳಿಸಿದೆ.

ಈ ಬಗ್ಗೆ ಟ್ಟೀಟ್ ಮಾಡಿರುವ ಕಂಪನಿಯು, ವಾರದಲ್ಲಿ 5 ದಿನಗಳಲ್ಲಿ ಈ ವಿಮಾನ ಇರಲಿದೆ. ಅಹಮದಾಬಾದ್‌ ಮಾರ್ಗವಾಗಿ ಹಾರಾಟ ನಡೆಸಲಿದೆ. ಸೋಮವಾರ, ಗುರುವಾರ, ಶುಕ್ರವಾರ ಹಾಗೂ ಶನಿವಾರ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 9.10ಕ್ಕೆ ಹೊರಡುವ ವಿಮಾನವು ಮಧ್ಯಾಹ್ನ 12ಕ್ಕೆ ಭುಜ್‌ ತಲುಪಲಿದೆ. ಆ ದಿನಗಳಲ್ಲಿ ಅಲ್ಲಿಂದ ಮಧ್ಯಾಹ್ನ 12.30ಕ್ಕೆ ಹೊರಡುವ ವಿಮಾನವು ಮಧ್ಯಾಹ್ನ 3.30ಕ್ಕೆ ಇಲ್ಲಿಗೆ ಬಂದಿಳಿಯಲಿದೆ ಎಂದು ಮಾಹಿತಿ ನೀಡಿದೆ.

ಈ ವಿಮಾನವು ಬುಧವಾರ ಇಲ್ಲಿಂದ ಮಧ್ಯಾಹ್ನ 2.15ಕ್ಕೆ ಹೊರಟು ಸಂಜೆ 5.10ಕ್ಕೆ ತಲುಪಲಿದೆ. ಅಲ್ಲಿಂದ ಸಂಜೆ 5.35ಕ್ಕೆ ಹೊರಡಲಿದ್ದು, ರಾತ್ರಿ 8.30ಕ್ಕೆ ಬಂದು ತಲುಪಲಿದೆ. ಅಹಮದಾಬಾದ್‌ನಲ್ಲಿ ನಿಲುಗಡೆ ಇರಲಿದೆ. ಪ್ರಯಾಣ ಟಿಕೆಟ್‌ ದರವು ₹ 1,999ರಿಂದ ಶುರುವಾಗಲಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT