‘ಉತ್ತಮ ರ‍್ಯಾಂಕ್ ಗಳಿಸಿದವರಿಗೆ ಉಚಿತ ಶಿಕ್ಷಣ’

7

‘ಉತ್ತಮ ರ‍್ಯಾಂಕ್ ಗಳಿಸಿದವರಿಗೆ ಉಚಿತ ಶಿಕ್ಷಣ’

Published:
Updated:
Deccan Herald

ಬೆಳಗಾವಿ: ಸಿಇಟಿಯಲ್ಲಿ 1500ಕ್ಕಿಂತ ಕಡಿಮೆ ಶ್ರೇಣಿಯನ್ನು ಪಡೆದು ಜಿಐಟಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಬಿಇ ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು ಎಂದು ಜಿಐಟಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಯು.ಎನ್. ಕಾಲಕುಂದ್ರಿಕರ ತಿಳಿಸಿದರು.

ಕಾಲೇಜಿನಲ್ಲಿ ಸೋಮವಾರ ನಡೆದ ಹೊಸ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪರಿಶ್ರಮದಿಂದ ಮಾತ್ರವೇ ಯಶಸ್ಸು ಗಳಿಸಬಹುದು. ಕಾಲೇಜಿನಲ್ಲಿ ಪ್ರಸ್ತುತ ಔದ್ಯೋಗಿಕ ವಲಯದ ಬೇಡಿಕೆಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ಕೈಗಾರಿಕೆಗಳಿಗೆ ಸಿದ್ಧವಾದ ಎಂಜಿನಿಯರ್‌ಗಳು ಎನ್ನುವ ಕಲ್ಪನೆ ಇಟ್ಟುಕೊಂಡು ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಹೊಸ ಉಪಾಯಗಳಿಗೆ ರೆಕ್ಕೆ ಕೊಟ್ಟು ಸ್ವಾವಲಂಬಿಯಾಗಿ ನವೋದ್ಯಮ ಆರಂಭಿಸುವುದಕ್ಕೂ ಪ್ರೋತ್ಸಾಹಿಸಲಾಗುತ್ತಿದೆ’ ಎಂದು ಹೇಳಿದರು.

ಪ್ರಾಚಾರ್ಯ ಎ.ಎಸ್. ದೇಶಪಾಂಡೆ ಮಾತನಾಡಿದರು.‌ ಡೀನ್ ಎಂ.ಎಸ್. ಪಾಟೀಲ, ಪ್ರಥಮ ವರ್ಷದ ಸಂಯೋಜಕ ಎಂ.ಕೆ. ರೆಂದಾಳೆ ಇದ್ದರು.

ಪ್ರೊ.ನೂಪುರ್ ಮತ್ತು ಪ್ರೊ.ಪ್ರಾಜಕ್ತ ನಿರೂಪಿಸಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !