ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ ನದಿಗೆ ಹಾರಿದವರು ನೀರುಪಾಲು!

ರಾಮದುರ್ಗ (ಬೆಳಗಾವಿ): ಇಲ್ಲಿ ಸೋಮವಾರ ಜೂಜಾಟದಲ್ಲಿ ತೊಡಗಿದ್ದಾಗ, ದಾಳಿ ನಡೆಸಿದ ಪೊಲೀಸರಿಂದ ತಪ್ಪಿಸಿಕೊಳ್ಳಲು ಇಬ್ಬರು ಮಲಪ್ರಭಾ ನದಿಗೆ ಹಾರಿದ್ದಾರೆ.
ನದಿಯ ಪಕ್ಕದ ಪೊದೆಯ ಬಳಿ ಗುಂಪೊಂದು ಜೂಜಾಡುತ್ತಿತ್ತು. ಪೊಲೀಸರು ಬಂದಿದ್ದರಿಂದ ಅವರು ಚದುರಿದ್ದಾರೆ. ಈ ವೇಳೆ ಇಬ್ಬರು ನದಿ ನೀರಿಗೆ ಹಾರಿದ್ದಾರೆ. ಅವರ ಪತ್ತೆಗಾಗಿ ಕಾರ್ಯಾಚರಣೆ ನಡೆದಿದೆ.
ಮಂಜುನಾಥ ಲಕ್ಷ್ಮಣ ಬಂಡಿವಡ್ಡರ (28) ಹಾಗೂ ಸಮೀರ ಮಹಮದಸಾಬ ಬಟಕುರ್ಕಿ (23) ನದಿಗೆ ಹಾರಿದವರು.
ಪೊಲೀಸರು, ಅಗ್ನಿಶಾಮಕ ದಳದವರು ಹಾಗೂ ಈಜು ತಜ್ಞರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ನೀರಿನಲ್ಲಿ ಮುಳುಗುತ್ತಿದ್ದ ಸಂದರ್ಭದಲ್ಲಿ ಪೊಲೀಸರು ರಕ್ಷಣೆಗೆ ಮುಂದಾಗಲಿಲ್ಲ ಎಂದು ಆರೋಪಿಸಿ, ಜನರು ಆಕ್ರೋಶ ವ್ಯಕ್ತಪಡಿಸಿದರು. ಶೋಧ ಕಾರ್ಯಾಚರಣೆ ವಿಳಂಬವಾಗಿದ್ದಕ್ಕೆ ಕುಟುಂಬದವರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.