ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಜಯಂತಿ, ಕೊರೊನಾ ಯೋಧರಿಗೆ ಅಭಿನಂದನೆ

Last Updated 2 ಅಕ್ಟೋಬರ್ 2020, 11:05 IST
ಅಕ್ಷರ ಗಾತ್ರ

ಐಗಳಿ: ‘ಫಲ ಅಪೇಕ್ಷೆ ಇಲ್ಲದೆ ಸೇವೆ ಮಾಡುವಲ್ಲಿ ಸಿಗುವ ಸಂತೋಷ ಇನ್ನೊಂದರಲ್ಲಿಲ್ಲ. ನಾವು ಮಾಡುವ ಸೇವೆಯನ್ನು ಜನರು ಗುರುತಿಸುತ್ತಾರೆ’ ಎಂದು ಆಯುಷ್ ನಿವೃತ್ತ ಅಧಿಕಾರಿ ಡಾ.ಬಸಗೌಡ ಪಾಟೀಲ ಹೇಳಿದರು.

ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ನಡೆದ ಗಾಂಧಿ ಜಯಂತಿ, ಡಾ.ಪಾಟೀಲ ಸಹೋದರರು ಹಮ್ಮಿಕೊಂಡಿದ್ದ ಕೊರೊನಾ ಯೋಧರಿಗೆ ಅಭಿನಂದನಾ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖಂಡ ಸಿ.ಎಸ್. ನೇಮಗೌಡ, ಶಿವಾನಂದ ಸಿಂದೂರ, ವೈದ್ಯಾಧಿಕಾರಿ ಪೂರ್ಣಿಮಾ ಮುದಗೌಡರ ಮಾತನಾಡಿದರು.

ಪಿಎಸ್‌ಐ ಶಿವರಾಜ ನಾಯಕವಾಡ, ಪಿಡಿಒ ರಾಜೆಂದ್ರ ಪಾಠಕ, ಕಲಾವಿದ ಬಸವಲಿಂಗ ಸ್ವಾಮೀಜಿ, ಗ್ರಾಮಲೆಕ್ಕಾಧಿಕಾರಿ ಎಂ.ಎಂ. ಮಲ್ಲುಖಾನ್ ಅವರನ್ನು ಡಾ.ಪಾಟೀಲ ಸಹೋದರರು ಅಭಿನಂದನಾ ಪತ್ರ ನೀಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಯಲ್ಲಪ್ಪ ಮಿರ್ಜಿ, ಸಿದಗೌಡ ಪಾಟೀಲ, ಅಪ್ಪಾಸಾಬ ಪಾಟೀಲ, ಅಜಿಯ ಜತ್ತಿ, ಚಂದ್ರಶೇಖರ ಬೆಳಗಲಿ, ಡಾ.ರವಿ ಮುದಗೌಡರ, ಶಿವನಿಂಗ ಅರಟಾಳ, ಮುಖ್ಯ ಶಿಕ್ಷಕ ಎಸ್.ಎಂ. ಜನಗೌಡ, ದುಂಡಪ್ಪ ದೊಡಮನಿ, ಅಪ್ಪಸಾಬ ಮದಬಾವಿ, ಹಣಮಂತ ಮಿರ್ಜಿ, ಜಗದೀಶ ಕೊರಬು ಇದ್ದರು.

ಕೇದಾರಿ ಬಿರಾದಾರ ಸ್ವಾಗತಿಸಿದರು. ಮಲಗೌಡ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT