ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ವಿಘ್ನ ನಿವಾರಕನಿಗೆ ಅಂತಿಮ ವಿದಾಯ

Published 23 ಸೆಪ್ಟೆಂಬರ್ 2023, 15:56 IST
Last Updated 23 ಸೆಪ್ಟೆಂಬರ್ 2023, 15:56 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಪ್ರತಿಷ್ಠಾಪಿಸಲಾಗಿದ್ದ ಐದನೇ ದಿನದ ಗಣೇಶನ ಮೂರ್ತಿಗಳನ್ನು ಶನಿವಾರ ವಿಸರ್ಜಿಸಲಾಯಿತು. ಮನೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಕೂರಿಸಿ, ಪೂಜಿಸಿದ ಏಕದಂತನಿಗೆ ಭಕ್ತರು ಭಕ್ತಿಯ ವಿದಾಯ ಹೇಳಿದರು.

ಇಲ್ಲಿನ ಶಹಾಪುರದ ಕಪಿಲೇಶ್ವರ ದೇವಸ್ಥಾನದ ಹೊಸ ಮತ್ತು ಹಳೆಯ ಹೊಂಡಗಳು, ಇಂದ್ರಪ್ರಸ್ಥ ನಗರದ ಜಕ್ಕೇರಿ ಹೊಂಡ, ಕೋಟೆ ಕೆರೆ, ಅನಗೋಳ ಕೆರೆ ಮತ್ತಿತರ ಕಡೆ ಗಣೇಶನನ್ನು ವಿಸರ್ಜಿಸಿದರು. ‘ಗಣಪ‍ತಿ ಬಪ್ಪಾ ಮೋರಯಾ...’ ಎನ್ನುವ ಜೈಕಾರ ಮುಗಿಲು ಮುಟ್ಟಿದ್ದವು.

ಮೆರವಣಿಗೆ ಮೂಲಕ ಗಣೇಶನನ್ನು ವಿಸರ್ಜನಾ ಸ್ಥಳಕ್ಕೆ ಕರೆತಂದ ಭಕ್ತರು, ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಮೂರ್ತಿಗಳ ವಿಸರ್ಜನೆಗಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಸಂಚಾರಿ ವಾಹನಗಳ ವ್ಯವಸ್ಥೆ ಮಾಡಿದ್ದರು. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.

ಗ್ರಾಮೀಣ ಪ್ರದೇಶಗಳಲ್ಲಿ ನದಿ, ಕೆರೆ ಮತ್ತು ಬಾವಿಗಳಲ್ಲಿ ಜನರು ಗಣೇಶನನ್ನು ವಿಸರ್ಜಿಸಿ, ಅಂತಿಮ ನಮನ ಸಲ್ಲಿಸಿದರು.

ಬೆಳಗಾವಿಯ ಜಕ್ಕೇರಿ ಹೊಂಡದಲ್ಲಿ ಶನಿವಾರ ಗಣೇಶನ ಮೂರ್ತಿ ವಿಸರ್ಜಿಸಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT