ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಐಟಿ ಕಾಲೇಜ್‌ಗೆ ಜನರಲ್ ಚಾಂಪಿಯನ್ ಪ್ರಶಸ್ತಿ

Last Updated 1 ಆಗಸ್ಟ್ 2019, 10:25 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‌ಟಿಎಸ್‌ಟಿ) ಪ್ರಾಯೋಜಿತ 42ನೇ ರಾಜ್ಯಮಟ್ಟದ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಇಲ್ಲಿನ ಕೆಎಲ್‌ಎಸ್‌ ಗೋಗಟೆ ತಾಂತ್ರಿಕ ಕಾಲೇಜು (ಜಿಐಟಿ) ಜನರಲ್ ಚಾಂಪಿಯನ್‌ಶಿಪ್ ಪ್ರಶಸ್ತಿ ಪಡೆದುಕೊಂಡಿದೆ.

ಕೆಎಲ್ಇ ಡಾ.ಎಂ.ಎಸ್. ಶೇಷಗಿರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಸ್ಪರ್ಧೆಯಲ್ಲಿ ಜಿಐಟಿಯ ವಿವಿಧ ವಿಭಾಗಗಳಿಂದ ಒಟ್ಟು 17 ಪ್ರಾಜೆಕ್ಟ್‌ಗಳನ್ನು ಪ್ರಾಯೋಜಕತ್ವಕ್ಕಾಗಿ ಆಯ್ಕೆ ಮಾಡಲಾಗಿದ್ದು, ಅದರಲ್ಲಿ 11 ರಾಜ್ಯಮಟ್ಟದ ಪ್ರದರ್ಶನಕ್ಕೆ ಆಯ್ಕೆಯಾಗಿದ್ದವು. ಅಕ್ಷಯ್‌ ಕುಮಾರ್ ಪಿ., ಹರೀಶ್ ಬಿ., ಅಕ್ಷಯ ಪಿ. ಮತ್ತು ಗಿರೀಶ್ ಪಿ. ಒಳಗೊಂಡ ತಂಡ ಪ್ರಸ್ತುತಪಡಿಸಿದ ‘ಆನ್ ಎಕ್ಸ್‌ಪೆರಿಮೆಂಟಲ್ ಇನ್ವೆಸ್ಟಿಗೇಷನ್ ಆನ್ ಎಫೆಕ್ಟ್ ಆಫ್ ಯೂಸಿಂಗ್ ನಿಯರ್ ಡ್ರೈ ಮಷಿನಿಂಗ್ ಫಾರ್ ವರ್ಟಿಕಲ್ ಮಷಿನಿಂಗ್ ಸೆಂಟರ್’ ಪ್ರಾಜೆಕ್ಟ್‌ಗೆ ವರ್ಷದ ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿ ಗೆದ್ದಿದೆ. ಪ್ರೊ.ಹರ್ಷಿತ್ ಕುಲಕರ್ಣಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.

ಎಸ್. ಸಂಕೇತ್, ಸಾಕ್ಷಿ ಕೆ., ಶ್ರವಣಕುಮಾರ್ ಕೆ. ಮತ್ತು ಆದರ್ಶ ಪಾಟೀಲ ಒಳಗೊಂಡ ಮತ್ತೊಂದು ತಂಡವು ‘ಥರ್ಮೋಎಲೆಕ್ಟ್ರಿಕ್ ಪವರ್ ಜನರೇಷನ್ ಫ್ರಂಎಕ್ಸಾಸ್ಟ್ ಹೀಟ್‌’ ಪ್ರಾಜೆಕ್ಟ್‌ಗೆ ವರ್ಷದ ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿ ದೊರೆತಿದೆ. ಡಾ.ಸಚಿನ್ ಕುಲಕರ್ಣಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ಈ ಪ್ರದರ್ಶನದಲ್ಲಿ 160 ಎಂಜಿನಿಯರಿಂಗ್ ಕಾಲೇಜಿನಿಂದ 1200 ವಿದ್ಯಾರ್ಥಿಗಳನ್ನು ಒಳಗೊಂಡ 400 ತಂಡಗಳು ಭಾಗವಹಿಸಿದ್ದವು.

ಕೆಎಲ್‌ಎಸ್‌ ಕಾರ್ಯಾಧ್ಯಕ್ಷ ಎಂ.ಆರ್. ಕುಲಕರ್ಣಿ, ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಯು.ಎನ್. ಕಾಲಕುಂದ್ರಿಕರ, ಪ್ರಾಚಾರ್ಯ ಪ್ರೊ.ಡಿ.ಎ. ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT